Sunday, July 20, 2008

ಆಲ್ಬರನ ಪ್ಯಾರಡಾಕ್ಸ್

ಇಂದು ನಾನು ನಿಮ್ಮನ್ನು ಕ್ರಿ.ಶ. ೧೮೦೦ರ ಕಾಲಕ್ಕೆ ಕರೆದುಕೊಂಡುಹೋಗಲಿಚ್ಛಿಸುತ್ತೇನೆ. ಏನಪ್ಪ ಅಂಥಾ ವಿಶೇಷ ಈ ಕಾಲಮಾನದಲ್ಲಿ ಎಂದು ನೀವು ಕುತೂಹಲಿಗಳಾಗಿದ್ದೀರಲ್ಲವೇ ? ವಿಶೇಷವೇನೆಂದರೆ, ಇದು ಬಿಗ್ ಬ್ಯಾಂಗ್ ಸಿದ್ಧಾಂತದ ಜನ್ಮದ ಪೂರ್ವಕಾಲ.

ಕ್ರಿ.ಶ. ೧೮೦೦ ರ ಸುಮಾರಿಗೆ ಖಗೋಳ ವಿಜ್ಞಾನ ಸಾಕಷ್ಟು ಮುಂದುವರೆದಿತ್ತು. ನಕ್ಷತ್ರವೊಂದು ಸೂರ್ಯನಿಗಿಂತ ಹೆಚ್ಚು ಪ್ರಕಾಶಮಾನವೋ ಇಲ್ಲವೋ ಎಂದು ಕಂಡುಹಿಡಿಯಲು ಉಜ್ವಲಾಂಕ [stellar brightness magnitudes] ಇವೇ ಮುಂತಾದ ಮಾನದಂಡಗಳಿದ್ದವು. ನಮ್ಮ ಸೂರ್ಯನಿಗಿಂತಲೂ ಹೆಚ್ಚು ಪ್ರಜ್ವಲ ತಾರೆಗಳು ಪ್ರಪಂಚದಲ್ಲಿದೆ ಎಂದು ಗೊತ್ತಾಯಿತು. ಆಗ ಆಲ್ಬರ್ ಎನ್ನುವವ ಒಂದು ಪ್ರಶ್ನೆ ಕೇಳಿದ-

ಸೂರ್ಯನಿಗಿಂತಲೂ ಹೆಚ್ಚು ಪ್ರಕಾಶಮಾನವಾದ ನಕ್ಷತ್ರಗಳು ರಾತ್ರಿಯಾಗಸದಲ್ಲಿದ್ದರೂ ರಾತ್ರಿ ಕತ್ತಲು ಏಕೆ ?

ಈಗ ನಮಗಿದು ಪ್ರಶ್ನೆಯನ್ನಿಸುವುದೇ ಇಲ್ಲ. ಯಾಕಂದರೆ ಬಿಗ್ ಬ್ಯಾಂಗ್ ಸಿದ್ಧಾಂತ ನಮಗೆ ಅಷ್ಟು ಚಿರಪರಿಚಿತ. ಆದರೆ ನಾನು ನಿಮ್ಮನ್ನು ಕರೆದುಕೊಂಡು ಹೋಗುತ್ತಿರುವುದು ಬಿಗ್ ಬ್ಯಾಂಗ್ ಸಿದ್ಧಾಂತದ ಜನ್ಮಪೂರ್ವಕಾಲಕ್ಕೆ.

ಆಲ್ಬರನು ಈ ಪ್ರಶ್ನೆ ಕೇಳಬೇಕಾದರೆ ಕೆಲವು ಊಹನೆಗಳನ್ನು[assumption] ಮಾಡಿಕೊಂಡಿದ್ದ. ಅವೇನಪ್ಪ ಎಂದರೆ, ಈ ಪ್ರಪಂಚ ಸ್ಥಿರವಾಗಿದೆ ಮತ್ತು ತಾರೆಗಳು ಅಗಣಿತ.

ಇನ್ನೊಂದು ಮಹತ್ವಪೂರ್ಣ ಕಲ್ಪನೆ ಇದು :

ಇಡಿ ಪ್ರಪಂಚವನ್ನು [universe] ಒಂದು ಬೃಹತ್ ಗೋಲ ಎಂದುಕೊಳ್ಳೋಣ. ಎಲ್ಲ ತಾರೆಗಳೂ ಈ ಗೋಲದಲ್ಲಿ ಸಮನಾಗಿ ವಿಂಗಡಿಸಲ್ಪಟ್ಟಿವೆ. ಅಂದರೆ, ಕೆಲವೆಡೆ ನಕ್ಷತ್ರಗಳ ದಟ್ಟಣೆ ಜಾಸ್ತಿ, ಕೆಲವೆಡೆ ಕಡಿಮೆ ಅಂತ ಇರದೆ, ಎಲ್ಲೆಲ್ಲೂ ನಕ್ಷತ್ರಗಳು ಸಮಾನವಾಗಿಯೇ ಇದೆ. ಈ ಗೋಲವನ್ನು ನಾವು ಈರುಳ್ಳಿಯ ಪದರಗಳ ತರಹ ವಿಂಗಡಿಸೋಣ. ಆಗ ಗೋಲದ ಕೇಂದ್ರ ಬಿಂದುವಿನಿಂದ ಈ ಪದರದ ದೂರ [radius] ಹೆಚ್ಚುತ್ತಾ ಹೋಗುತ್ತದೆ. ಆದರೆ ಈ ದೂರಕ್ಕೆ ಇತಿಮಿತಿಯಿಲ್ಲ. ಅದು ಅನಂತ ಎಂದು ಆಲ್ಬರ್ ತಿಳಿದುಕೊಂಡಿದ್ದ. [ಚಿತ್ರ 1 ]




ಈ ಗೋಲದ ಕೇಂದ್ರಬಿಂದುವಿನಲ್ಲಿ ನಾವಿದ್ದೇವೆ[ನೋಡುಗ / ಭೂಮಿ ] ಅಂದುಕೊಳ್ಳೋಣ. ಎರಡು ಬೇರೆ ಬೇರೆ ಪದರಗಳಲ್ಲಿನ ನಕ್ಷತ್ರಗಳನ್ನು ತೆಗೆದುಕೊಂಡು ಅವುಗಳ ಉಜ್ವಲಾಂಕವನ್ನು ಕಂಡುಹಿಡಿಯೋಣ. ದೂರದ ನಕ್ಷತ್ರದಿಂದ ಬೆಳಕು ಕಡಿಮೆ ಬರುವುದು ಗೊತ್ತೇ ಇತ್ತು. ಆದರೆ ಪದರದಲ್ಲಿರುವ ನಕ್ಷತ್ರ ಪುಂಜಗಳ ಸಂಖ್ಯೆ ಕೇಂದ್ರಬಿಂದುವಿನಿಂದ ದೂರ ಹೋದಷ್ಟು ಹೆಚ್ಚುತ್ತವೆ. ನಕ್ಷತ್ರಗಳ ದೂರ ಬೆಳಕನ್ನು ಕಡಿಮೆ ಮಾಡಿದರೆ, ಅವುಗಳ ಸಂಖ್ಯೆ ಜಾಸ್ತಿಯಾದ್ದರಿಂದ ಅದು ಆ ನಷ್ಟವನ್ನು ಭರಿಸುತ್ತದೆ. ಆದ್ದರಿಂದ ಪದರವೊಂದರಿಂದ ಬರುವ ಪ್ರಪಂಚ ಸ್ಥಿರವಾದ್ದರಿಂದ ಹಾಗೂ ನಕ್ಷತ್ರಗಳು ಅಚಲವಾದ್ದರಿಂದ ನಮಗೆ ಪದರವೊಂದರಿಂದ ಬರುವ ಬೆಳಕು ಎಂದೆಂದಿಗೂ ಒಂದೇ ಇರಬೇಕು ಎಂದು ಅಲ್ಬರ್ ಪ್ರತಿಪಾದಿಸಿದ. [ಚಿತ್ರ 2 ]



ಹೀಗೆ ಎಲ್ಲಾ ಪದರಗಳ ಬೆಳಕನ್ನು ಒಟ್ಟುಗೂಡಿಸಿದರೆ ಆಕಾಶ ಕತ್ತಲಾಗಿರಲು ಸಾಧ್ಯವೇ ಇಲ್ಲ ! ಆದರೂ ಆಕಾಶ ರಾತ್ರಿ ಹೊತ್ತು ಕತ್ತಲೇಕೆ ???? ಈ ವಿರೋಧಾಭಾಸವೇ ಅಲ್ಬರನ ವಿರೋಧಾಭಾಸ[ಪ್ಯಾರಡಾಕ್ಸ್ ]

ಈ ಪ್ರಶ್ನೆಯನ್ನು ವಿಜ್ಞಾನಿಗಳು ಉತ್ತರಿಸಲು ಹೆಣಗಾಡಿದರು !

ಈ ಪ್ರಶ್ನೆಯ ಉತ್ತರ ಹುಡುಕಹೊರಟವರು ಈ ಸ್ಥಿರ ಪ್ರಪಂಚ ಅನ್ನುವ ಕಲ್ಪನೆಯನ್ನು ಪ್ರಶ್ನಿಸಿದರು. ಈ ಕಲ್ಪನೆಯ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಲು ಎಲ್ಲ ನಕ್ಷತ್ರಗಳ ರೋಹಿತ[spectrum] ಅನ್ನು ಪರೀಕ್ಷಿಸಿದರು. ಪ್ರಪಂಚ ಸ್ಥಿರವಲ್ಲ, ಅದು ಚಲನೆಯಲ್ಲಿದೆ, ಹಿಗ್ಗುತ್ತಿದೆ ಎನ್ನುವುದು ನಕ್ಷತ್ರ ನಮ್ಮಿಂದ ದೂರಸಾಗುತ್ತಿರುವುದರ ಗುರುತಾಗಿ ರೋಹಿತದಲ್ಲಿನ ರಕ್ತವರ್ಣ ಪಲ್ಲಟದಿಂದ [red shift ] * ಸಾಬೀತಾಯಿತು.

ಇನ್ನು ಅನಂತತೆಯ ಬಗ್ಗೆ. ಪ್ರಪಂಚ ಅನಂತವಾಗಿಯೇ ಇದ್ದಿದ್ದರೆ, ನಮಗೆ ಬರಬೇಕಿದ್ದ ಬೆಳಕಿನ ಪ್ರಮಾಣ ಒಂದೇ ಇರಬೇಕಿತ್ತು, ಎಂದೆಂದಿಗೂ ! ಆದರೆ ಹಾಗಿಲ್ಲ ! ಆದ್ದರಿಂದ ಪ್ರಪಂಚಕ್ಕೆ ಒಂದು ಆರಂಭವಿದೆ, ಅಂತ್ಯವೂ ಇದೆ ! ಆರಂಭದಲ್ಲಿ ನಿಜವಾಗಿಯೂ ಬಹಳಷ್ಟು ಬೆಳಕಿತ್ತು. ಕ್ರಮೇಣ ಕ್ಷೀಣಿಸುತ್ತಾ ಹೋಯಿತು ಎಂಬ ವಾದವೊಂದು ಬಂದು ಬಿಗ್ ಬ್ಯಾಂಗ್ ಸಿದ್ಧಾಂತಕ್ಕೆ ಮೂಲವಾಯಿತು. ನಕ್ಷತ್ರಗಳು ಸಮನಾಗಿ ವಿಂಗಡಿಸಲ್ಪಟ್ಟಿಲ್ಲವೆಂಬುದು ಕಣ್ಣೋಟಕ್ಕೇ ಅರಿವಾಗುವ ಸತ್ಯವಾಗಿದ್ದಿತು.


ಆಲೆನ್ ಪೋ ಎನ್ನುವ ಮತ್ತೊಬ್ಬ ವಿಜ್ಞಾನಿ ಈ ವಿರೋಧಾಭಾಸಕ್ಕೆ ಮತ್ತೊಂದು ರೀತಿಯಲ್ಲಿ ಉತ್ತರ ಹೇಳಿದರು. ಅವರು ನಕ್ಷತ್ರಗಳ ಆಯಸ್ಸನ್ನು ಗಣನೆಗೆ ತೆಗೆದುಕೊಂಡರು. ನಕ್ಷತ್ರ ಚಿರಂಜೀವಿಯಲ್ಲ. ಅದಕ್ಕೂ ಸಾವಿದೆ. ಆದ್ದರಿಂದ ನಮಗೆ ಎಲ್ಲ ನಕ್ಷತ್ರಗಳಿಂದ ಬೆಳಕು ಬರಲು ಸಾಧ್ಯವೇ ಇಲ್ಲ. ಮತ್ತು, ನಕ್ಷತ್ರಗಳ ನಡುವೆ ಇರುವ ಅನಿಲ ಮತ್ತು ಧೂಳಿನ ಕಣಗಳು[interstellar matter] ಬೆಳಕನ್ನು ಹೀರುವುದರಿಂದ [absorption] ನಮಗೆ ಬರಬೇಕಾದ ಬೆಳಕು ಗಣನೀಯ ಪ್ರಮಾಣದಲ್ಲಿ ಇಳಿಯುತ್ತದೆ. ಹಾಗಾಗಿ ನಮಗೆ ಕೆಲ ನಕ್ಷತ್ರಗಳಿಂದ ಮಾತ್ರವೇ ಬೆಳಕು ಲಭ್ಯ. ಕೆಲವು ನಕ್ಷತ್ರಗಳ ಬೆಳಕು ನಮ್ಮನ್ನು ತಲುಪುವ ಮುನ್ನವೇ interstellar matter ನ ಗರ್ಭ ಸೇರಿರಬಹುದು, ಮತ್ತು ಇನ್ನು ಕೆಲವು ನಮಗೆ ತಲುಪಿ ನಾವದರ ಜಾಡನ್ನು ಹಿಡಿದು ಹೊರಟರೆ ಆ ನಕ್ಷತ್ರವು ತನ್ನ ಆಯುಷ್ಯ ಮುಗಿಸಿ ಕಪ್ಪು ರಂಧ್ರವಾಗಿರಬಹುದು !

ಹೀಗೆ ಆಲ್ಬರನ ಈ ಪ್ರಶ್ನೆ ಬಿಗ್ ಬ್ಯಾಂಗ್ ಸಿದ್ಧಾಂತದ ಆವಿಷ್ಕಾರಕ್ಕೆ ಮೂಲವಾಯಿತು, ಮತ್ತು ಆ ಸಿದ್ಧಾಂತ ಸರಿ ಎಂದು ಸಾಬೀತುಪಡಿಸುವುದರಲ್ಲಿ ಪ್ರಮುಖ ಸಾಕ್ಷಿಯಾಯಿತು.


* red shift: ನಕ್ಷತ್ರದಲ್ಲಿರುವ ಅನಿಲಗಳ ಪರಮಾಣುಗಳು, ಅಲ್ಲಿರುವ ಶಾಖದಿಂದ ಶಕ್ತಿ ಪಡೆದು ಎತ್ತೆರದ ಶಕ್ತಿಮಟ್ಟಗಳಿಗೆ ಉದ್ರೇಕಗೊಳ್ಳುತ್ತವೆ . ಮತ್ತವು ತಮ್ಮ ಮೂಲ ಸ್ಥಿತಿಗೆ ಬಂದಾಗ, ಅವುಗಳ ಶಕ್ತಿಮಟ್ಟಗಳ ವ್ಯತ್ಯಾಸಕ್ಕೆ ನೇರ ಅನುಪಾತದಲ್ಲಿ ಬೆಳಕಿನ ಕಿರಣವೊಂದು ಉತ್ಪನ್ನವಾಗುತ್ತದೆ. ಅದು ಆ ಅನಿಲದ ಲಾಕ್ಷಣಿಕ ಬೆಳಕಿನ ಕಿರಣ[characteristic radiation]. ಹೀಗೆ ನಕ್ಷತ್ರವೊಂದರಿಂದ ಬರುವ ಕಿರಣಗಳ ಸಮೂಹವನ್ನು ನಾಕ್ಷತ್ರಿಕ ರೋಹಿತವೆಂದು ಕರೆಯಲಾಗುತ್ತದೆ. ಈ ರೋಹಿತವನ್ನು ನಮ್ಮ ಸಪ್ತವರ್ಣ ರೋಹಿತಕ್ಕೆ ಹೋಲಿಸಲಾಗುತ್ತದೆ. ನಕ್ಷತ್ರ ನಮ್ಮೆಡೆಗೆ ಚಲಿಸುತ್ತಿದ್ದರೆ ರೋಹಿತದಲ್ಲಿನ ಪ್ರತಿಯೊಂದು ಗೆರೆಯು ನೀಲಿ ಕಿರಣಗಳ ಕಡೆಗೆ ಸರಿದಿರುತ್ತವೆ. ಅಂದರೆ ಅವುಗಳ ಸ್ಥಾನ ಪಲ್ಲಟವಾಗಿರುತ್ತದೆ.ಇದು ನೀಲಿ ವರ್ಣ ಪಲ್ಲಟ. ಅವು ನಮ್ಮಿಂದ ದೂರ ಸರಿಯುತ್ತಿವೆಯಾದರೆ ಅದು ರಕ್ತವರ್ಣದ [ಕೆಂಪು]ಕಡೆಗೆ ಸರಿದಿರುತ್ತವೆ. ಆದ್ದರಿಂದ ಇದಕ್ಕೆ ರಕ್ತವರ್ಣ ಪಲ್ಲಟ ಎಂದು ಕರೆಯಲಾಗುತ್ತದೆ. ಈ ವರ್ಣ ಪಲ್ಲಟಗಳನ್ನು ಡಾಪ್ಲರ್ ಪರ್ರಿಣಾಮ ಎಂದು ಕರೆಯುತ್ತಾರೆ.
ಇದನ್ನು ಪ್ರತ್ಯಕ್ಷ ನೋಡಲು ಇಲ್ಲಿ ಕ್ಲಿಕ್ಕಿಸಿ .


ನಕ್ಷತ್ರಗಳ ರೋಹಿತಗಳು ರಕ್ತವರ್ಣ ಪಲ್ಲಟವನ್ನೇ ಹೆಚ್ಚು ಪ್ರದರ್ಶಿಸಿ ಅವು ನಮ್ಮಿಂದ ದೂರ ಸರಿಯುತ್ತಿದೆ ಎಂದು ನಿರೂಪಿಸಿದವು. ಆದ್ದರಿಂದ ಪ್ರಪಂಚ ಹಿಗ್ಗುತ್ತಿದೆ ಎಂದು ತಿಳಿದುಬಂತು.



23 comments:

Shashanka G P (ಉನ್ಮುಖಿ) said...

ಲಕ್ಷ್ಮಿಯವರೆ,
ಇಲ್ಲಿ ಮಾಡಿರುವ ಊಹನೆಗಳನ್ನು ನೋಡಿದರೆ ಅವುಗಳಲ್ಲಿ ಅ೦ತರ್ಹಿತವಾಗಿ, ಜಗತ್ತು ಸಾ೦ತ ಎ೦ದು ಒಪ್ಪಿಕೊ೦ಡ೦ತಿದೆ. ಆಕಾಶಕ್ಕೆ ಅ೦ತ್ಯ ಇರಬಲ್ಲುದಾದರೂ ಹೇಗೆ? ಇದೆ ಎ೦ದುಕೊ೦ಡರೂ ಆ ಅ೦ತ್ಯ ಹೇಗಿರಬಹುದು, ಆ ಅ೦ತ್ಯವನ್ನು/ಗಡಿಯನ್ನು ಬೇಧಿಸಿಕೊ೦ಡು ಹೋದರೆ ನ೦ತರ ಏನು? ಮತ್ತೆ ಆಕಾಶವೇ ಇರಬೇಕು ತಾನೆ(ಸ್ಥಳಾವಕಾಶವೆ ಆಕಾಶ ಅಲ್ಲವೆ?). ಹಾಗಾಗಿ ಆಕಾಶದಲ್ಲಿ ಆದಿ, ಅ೦ತ್ಯ, ಮಧ್ಯ ಬಿ೦ದುಗಳು ಇರಲಾರವು; ಬಹುಶಃ ಅವುಗಳಿಗೆ ಅರ್ಥವೇ ಇಲ್ಲ.

ಹೀಗೆ ಅನ೦ತವಾಗಿರುವ ಆಕಾಶದಲ್ಲಿ ನಾವು ಮಾತನಾಡುತ್ತಿರುವ ಜಗತ್ತು ನಾವು ಗುರುತಿಸಿರುವ೦ತದ್ದು. ನಮ್ಮ ವೈಜ್ಞಾನಿಕ ಸಲಕರಣೆಗಳ ವ್ಯಾಪ್ತಿಗೆ ನಿಲುಕಿರುವ೦ತದ್ದು. ಇಲ್ಲಿ ನಾವು Big Bang theoryಯನ್ನು ಒಪ್ಪುವೆವಾದರೆ, ಈ ಮಹಾಸ್ಫೋಟಕ್ಕೆ ಒ೦ದು ಪ್ರಾರ೦ಭ ಬಿ೦ದು ಇರಬೇಕು ಎ೦ದು ಒಪ್ಪಿಕೊ೦ಡ೦ತೆ. ಆ ಬಿ೦ದುವಿನ ಸುತ್ತ ನಾವು ಕಾಣುತ್ತಿರುವ ಅಸ್ತಿತ್ವ ವ್ಯಾಪಿಸಿದೆ ಎನ್ನಬಹುದು, ಈ ಸಿದ್ಧಾ೦ತದ ಪ್ರಕಾರ. ಈ ಏಕಬಿ೦ದು ಕೇ೦ದ್ರಿತ ಜಗತ್ತಿನ ಕಲ್ಪನೆ, ಆದಿಮಧ್ಯಾ೦ತರಹಿತವಾದ ಆಕಾಶಕ್ಕೆ ಒಪ್ಪುವುದಾದರೂ ಹೇಗೆ? ನಾವು ಕಾಣುತ್ತಿರುವ ಜಗತ್ತಿಗೆ ಈ ಕೇ೦ದ್ರ ಬಿ೦ದುವಿನ ಕಲ್ಪನೆ ಒಪ್ಪಬಹುದೇನೋ, ಆದರೆ ಅನ೦ತ ಆಗಸದಲ್ಲಿ ನಾವು ಕಾಣುತ್ತಿರುವುದಷ್ಟೇ ಅಸ್ತಿತ್ವ ಎ೦ದು ಹೇಗೆ ತಾನೇ ಹೇಳಲು ಸಾಧ್ಯ?

Lakshmi Shashidhar Chaitanya said...

ಇಲ್ಲಿ ಮಾಡಿರುವ ಊಹನೆಗಳನ್ನು ನೋಡಿದರೆ ಅವುಗಳಲ್ಲಿ ಅ೦ತರ್ಹಿತವಾಗಿ, ಜಗತ್ತು ಸಾ೦ತ ಎ೦ದು ಒಪ್ಪಿಕೊ೦ಡ೦ತಿದೆ.

ಹೌದು.
ಆಕಾಶಕ್ಕೆ ಅ೦ತ್ಯ ಇರಬಲ್ಲುದಾದರೂ ಹೇಗೆ?
ಆಕಾಶವನ್ನು ನೀವು space ಎಂದು ತಿಳಿದುಕೊಂಡಿದ್ದೇರೆಂದು ನಂಬಿದ್ದೇನೆ. AlbertEinsteinರ general theory of relativity ಪ್ರಕಾರ ನಮ್ಮ ಆಕಾಶವು ಹಿಗ್ಗುತ್ತಾ ಹೋಗುತ್ತಿದೆ. ಆದರೆ ಆ ಹಿಗ್ಗುವಿಕೆಗೆ ಒಂದು ಅಂತ್ಯವಿದೆ. ಆ ಅಂತ್ಯದ ಆರಂಭವೇ ಬಿಗ್ ಕ್ರಂಚ್.

ಬಿಗ್ ಕ್ರಂಚ್ ಆದಮೇಲೆ ಏನೂ ಉಳಿಯುವುದಿಲ್ಲ ಎಂದು ಪ್ರತಿಪಾದಿಸಲಾಗುತ್ತಿದೆ.ಆದ್ದರಿಂದ ಆಕಾಶದ (space) ಗೆ ಆದಿ, ಮಧ್ಯ ಮತ್ತು ಅಂತ್ಯವಿದೆ.

ಆದರೆ ಅನ೦ತ ಆಗಸದಲ್ಲಿ ನಾವು ಕಾಣುತ್ತಿರುವುದಷ್ಟೇ ಅಸ್ತಿತ್ವ ಎ೦ದು ಹೇಗೆ ತಾನೇ ಹೇಳಲು ಸಾಧ್ಯ?

dark matter ಮತ್ತು ಕಪ್ಪು ರಂಧ್ರಗಳು ಎಂಬ concept ನಿಮಗೆ ತಿಳಿದಿದೆ ಎಂದು ಭಾವಿಸಿದ್ದೇನೆ. ನಮಗೆ ಕಾಣಿಸದ್ದೂ ಅಸ್ತಿತ್ವದಲ್ಲಿದೆ ಎಂದು ಇವೇ ಪ್ರತಿಪಾದಿಸುತ್ತಿವೆ.

Ramesh BV (ಉನ್ಮುಖಿ) said...

ಕುತೂಹಲಿಯವರೆ,
ಕನ್ನಡದಲ್ಲಿ ಆಲ್ಬರನ ಪ್ಯಾರಡಾಕ್ಸ್... ಚಿತ್ರಣದ ಪ್ರಯತ್ನ ಚೆನ್ನಾಗಿ ಮಾಡಿದ್ದೀರ.

ಸೃಷ್ಟಿಯನ್ನು ಕಲ್ಪಿಸಿ ಚಿತ್ರಿಸುವ ಪ್ರಯತ್ನ ಮನುಷ್ಯನಿಗೆ ಅಸ್ಥಿತ್ವವನ್ನು ಪ್ರಶ್ನಿಸುವ ಬುದ್ಧಿ ಬಂದಾಗಿನಿಂದ ಇದೆ ಎನ್ನಬಹುದು.. ಇವು ಧಾರ್ಮಿಕ ರೂಪಗಳಲ್ಲೂ ಇವೆ... ವಿಜ್ಣಾನ ಹೆಸರಿನ ಮತ್ತೊಂದು ರೂಪದಲ್ಲೂ ಇವೆ..
ಇರಲಿ ನಾವೇನು ಮಾಡಲು ಸಾಧ್ಯ... ಅಸ್ಥಿತ್ವದ ಸಿದ್ಧಾಂತಗಳು ಬರುತ್ತಲೇ ಹೋಗುತ್ತವೆ,ಹಿಂದಿನವುಗಳನ್ನು ಪ್ರಶ್ನಿಸುತ್ತ... ಬಹುಶಃ ಇವುಗಳಿಗೆ ಕೊನೆಯೇ ಇರಲಾರದು ಎಂದುಕೊಳ್ಳುತ್ತೇನೆ..


ನನಗಂತೂ intuitive ಆಗಿ ಆಕಾಸಕ್ಕೆ ಅಂತ್ಯವಿದೆ ಎಂಬುದನ್ನು ಕಲ್ಪಿಸಲೂ ಆಗದು, ನಂಬಲೂ ಆಗದು.

ನಮ್ಮೆಲ್ಲರಿಗೆ ತಿಳಿದಿರುವಂತೆ ಭೌತಿಕ ಅಸ್ಠಿತ್ವವನ್ನು ವಿವರಿಸಲು ಹೊಸ ಹೊಸ ಆಯಾಮಗಳನ್ನು(Dimensions) ವಿಜ್ನಾನ ಸೃಷ್ಟಿಸುತ್ತಲೇ ಇದೆ. ಇವೂ ಕೂಡ assumptions ಮತ್ತು postulates ಗಳೆಂಬ ಮೂಢನಂಬಿಕೆಗಳ ಮೇಲಯೇ ನೆಲೆಯೂರಿರುವುದು. ಆದ್ದರಿಂದ ಯಾವುಗಳನ್ನೂ ಪೂರ್ಣವಾಗಿ ನಂಬಲಾಗದು.. ಅಸ್ಥಿತ್ವ ಎಂದೆಂದಿಗೂ ಕುತೂಹಲದ ಪ್ರಶ್ನೆಯಾಗಿಯೇ ಉಳಿಯುವುದು ಎಂದುಕೊಂಡಿದ್ದೇನೆ.

ಬೆಳಕು ಇಂದಿಗೂ ಕುತೂಹಲವಾಗಿಯೇ ಉಳಿದಿದೆ. ಇದರ ವಿವರಣೆಗಳು ಕುರುಡರು ಆನೆಯನ್ನು ಗೋಡೆ, ಕಂಬ, ಹಗ್ಗ ಎಂಬಂತೆ. ಅಂತಹುದರಲ್ಲಿ ಬೆಳಕಿನೊಂದರ ಅಲ್ಪ ವಿಶ್ಲೇಷಣೆಯ ಮೇಲೆ ಮತ್ತು ಹಲವಾರು ಊಹಾಪೋಹಗಳ ಮೇಲೆ ಆಧಾರವಾಗಿರುವ ಎಲ್ಲವುಗಳೂ ಅನುಮಾನದವುಗಳೇ.. ಕಪ್ಪುರಂಧ್ರದ concept ಕೂಡ.
ವಿಜ್ಣಾನ ಕುತೂಹಲದ ನಾನಾ ರೂಪಗಳನ್ನು ಧರಿಸುತ್ತಲೇ ಹೋಗುವುದು.. ನ್ಯೂಟನ್ನಿನಿಂದ.. ಅಯಿನ್ಸ್ಟೇಯಿನಿಂದ.. ಸ್ಟೀಫ಼ನ್ ಹಾಕಿಂಗ್ಸ್ ನಿಂದ.. ಮುಂದೆ ಮತ್ತೊಬ್ಬನಿಂದ, ಮಗದೊಬ್ಬನಿಂದ..

ಏನೇ ಇರಲಿ, ನಮಗಂತೂ ವಿಜ್ನಾನದ ಇತಿಹಾಸವನ್ನು ಆಸಕ್ತಿಯಿಂದ ಕೇಳಿ, ಯಥಾವತ್ತಾಗಿ ಹೇಳಿ, ಕುತೂಹಲದಿಂದ ನೋಡಲಷ್ಟೇ ಬರುವುದು...!!!

ವಿಜ್ಣಾನದ ಇತಿಹಾಸ, ಆಗುಹೋಗುಗಳು, ಪ್ರಚಲಿತಗಳು, ವಿಶ್ಲೇಷಣಾ ನಿರೂಪಣೆಗಳು ಭಾರತೀಯ ಭಾಷೆಗಳಲ್ಲಿ ತುಂಬಾ ವಿರಳ.. ನಿಮ್ಮ ಪ್ರಯತ್ನಗಳು ಇನ್ನೂ ಉತ್ಸಾಹದಿಂದ ಸಾಗಲಿ.. keep up the show..

ಧನ್ಯವಾದ,
ರಮೇಶ

Shashanka G P (ಉನ್ಮುಖಿ) said...

ಸಾಂತ ಎನ್ನುವುದು ಕೇವಲ ಈ ಸಿದ್ಧಾಂತಕ್ಕೆ ಮಾತ್ರ ಸೀಮಿತವಾದುದೋ ಅಥವಾ ಆಧುನಿಕ ವಿಜ್ಞಾನವೂ ಇದನ್ನೇ ಅನುಮೋದಿಸುತ್ತದೆಯೋ ಸ್ಪಷ್ಟವಾಗಲಿಲ್ಲ.

ಆಕಾಶ ಹಿಗ್ಗುತ್ತಾ ಹೋಗುವುದು ಎಂದರೆ ಅದನ್ನೊಂದು ಬಲೂನಿನಂಥ ವಸ್ತು ಎಂದು ಭಾವಿಸಬೇಕು. ಅದು ಹಿಗ್ಗುತ್ತಾ ಹೋದಂತೆ ಅದರ ಒಳಗಿನ, ಮೇಲ್ಮೈನ ಬಿಂದುಗಳೆಲ್ಲ ಪರಸ್ಪರ ದೂರ ಸರಿಯುತ್ತವೆ ಎಂದಂತೆ, ಸಹಜವಾಗಿಯೇ ತಾರೆಗಳೂ ಕೂಡ ಆಕಾಶದಲ್ಲಿಯೇ ಇರುವ ಕಾರಣ ಅವೂ ಕೂಡ ದೂರ ಸರಿಯಬೇಕು, ಹೌದು ತಾನೆ. ಅದು ಹೌದಾದರೆ ಜೊತೆಗೇ ಮತ್ತೊಂದು ಪ್ರಶ್ನೆ ಎದುರಾಗುತ್ತದೆ. ಆಕಾಶ ಹಿಗ್ಗುವುದೆಂದಾದರೆ ಆಕಾಶದ ಹೊರತಾದ ಸ್ಥಳಾವಕಾಶವೊಂದಿಷ್ಟಿರಬೇಕು. ಇಲ್ಲವಾದರೆ ಆಕಾಶ ಹಿಗ್ಗುವುದಾದರೂ ಎಲ್ಲಿಗೆ? ಜೊತೆಗೆ, ಈ ಅವಕಾಶ/ಜಾಗ ಮುಗಿಯಲು ಸಾಧ್ಯವಿಲ್ಲ, ಹೇಗೆ ತಾನೆ ಮುಗಿಯಲು ಸಾಧ್ಯ? ಅದಕ್ಕೆ ಗಡಿ ಇರುವುದೆಂದು ಒಂದೊಮ್ಮೆ ಒಪ್ಪಿಕೊಂಡರೂ ಆ ಗಡಿ ಹೇಗಿದೆ, ಅದನ್ನು ಬೇಧಿಸಿಕೊಂಡು ಮುಂದೆ ಹೋದರೆ ಏನು ಸಿಗುವುದು ಎಂದು ಯೋಚಿಸಿದಲ್ಲಿ ಮತ್ತೆ ಸ್ಥಳಾವಕಾಶವೇ ಇರಬೇಕು ಎಂದು ಭಾವಿಸದೆ ವಿಧಿಯಿಲ್ಲ. ಹಾಗಾಗಿ ಸ್ಥಳಾವಕಾಶಕ್ಕೆ ಭೇದವಿಲ್ಲ ಮತ್ತು ಮಿತಿಯಿಲ್ಲವೆಂಬುದನ್ನು ನಾವು ಒಪ್ಪಲೇಬೇಕಾಗುತ್ತದೆ. ಇದು ತಾರ್ಕಿಕವಾಗಿಯೇ ಇದೆ ಎಂದು ಭಾವಿಸುವೆ. ಸರಿ, ಇದನ್ನು ಒಪ್ಪಿದರೆ ಇನ್ನೊಂದು ಸಮಸ್ಯೆ; ಸ್ಥಳಾವಕಾಶವೇ ತಾನೆ ಆಕಾಶವೆಂದು ಕರೆಯಲ್ಪಡುವುದು. ಅಕಾಶ ಮತ್ತು ಸ್ಥಳಾವಕಾಶ ಬೇರೆಯಲ್ಲವೆಂದರೆ ಆಕಾಶ ಸಾಂತ ಹೇಗಾಗುತ್ತದೆ? ಅದನ್ನು ಬಲೂನಿನಂತ ವಸ್ತುವೆಂದು ಪರಿಗಣಿಸಲು ಹೇಗೆ ಸಾಧ್ಯ?

ನನ್ನ ಕಾಮೆಂಟಿನಿದ ನೀವು ಎತ್ತಿಕೊಂಡ ಕೊನೆಯ ಸಾಲನ್ನು ಅದರ ಸಂದರ್ಭದಿಂದ ಪ್ರತ್ಯೇಕಿಸಿದ್ದೀರಿ ಎನ್ನಿಸುತ್ತದೆ. "ನಾವು ಕಾಣುವ ಅಸ್ತಿತ್ವ"ವೆಂದರೆ ನಮ್ಮ ಚರ್ಮಚಕ್ಷುಗಳಿಗೆ ಗೋಚರವಾಗುವಂತದ್ದು ಎಂದು ನನ್ನ ಅರ್ಥವಲ್ಲ, ವಿಜ್ಞಾನ ತಂತ್ರಜ್ಞಾನದ ಸಹಾಯದಿಂದ ನಾವು ಏನೇನು ಬಲ್ಲೆವೋ ಅದೆಲ್ಲವೂ, ತಾರೆ, ನಕ್ಷತ್ರಪುಂಜ, ನೀಹಾರಿಕೆ, ಕಪ್ಪುರಂಧ್ರ... ಉಳಿದುದೆಲ್ಲ, ನಮ್ಮ ಗ್ರಹಿಕೆಗೆ ನಿಲುಕಿರುವುದೆಲ್ಲವೂ. ಆ ವಾಕ್ಯವನ್ನು ಹೇಳುವಲ್ಲಿ ನನ್ನ ಅರ್ಥವಿಷ್ಟೇ - ನಮ್ಮ ಗ್ರಹಿಕೆಗೆ ನಿಲುಕಿರುವಷ್ಟು ಜಗತ್ತಷ್ಟು ಮಾತ್ರ ಮಹಾಸ್ಫೋಟಕ್ಕೆ ಪಕ್ಕಾಗಿರಬಹುದೇನೋ, ಆಕಾಶದ ಇನ್ನಾವುದೋ ಭಾಗದಲ್ಲಿ ಇನ್ನೂ ಅನೇಕ ಮಹಾಸ್ಫೋಟಗಳೋ ಮಹಾಕುಸಿತಗಳೋ ಸಂಭವಿಸುತ್ತಿರಬಹುದು. ಹೋಗಲಿ, ನಮ್ಮ ಅವಗಾಹನೆಗೆ ನಿಲುಕಿರುವಷ್ಟು ಮಾತ್ರವೇ ವಸ್ತುಜಗತ್ತು, ಇದರಂತೆ ಮತ್ತೊಂದು ಎಲ್ಲೂ ಇಲ್ಲ, ಮತ್ತದು ವ್ಯಾಕೋಚನಗೊಳ್ಳುತ್ತಿದೆ ಎಂದಿದ್ದರೂ ಸ್ವಲ್ಪಮಟ್ಟಿಗೆ ತಡ್ಕೋಬಹುದಿತ್ತು. ಅದನ್ನು ಬಿಟ್ಟು ಆಕಾಶವನ್ನೇ ಸಾಂತಗೊಳಿಸುವ ಸಾಹಸಕ್ಕೆ ಕೈಹಾಕಿದ್ದಾದರೂ ಏಕೆ, ಈ ತಥಾಕಥಿತ ವಿಜ್ಞಾನಿಗಳು?

sunaath said...

ಆಲ್ಬರನ ವೈರುಧ್ಯ (ಸರಿಯೆ?)ವನ್ನು ಕನ್ನಡದಲ್ಲಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು.

Lakshmi Shashidhar Chaitanya said...

ಸಾಂತ ಎನ್ನುವುದು ಕೇವಲ ಈ ಸಿದ್ಧಾಂತಕ್ಕೆ ಮಾತ್ರ ಸೀಮಿತವಾದುದೋ ಅಥವಾ ಆಧುನಿಕ ವಿಜ್ಞಾನವೂ ಇದನ್ನೇ ಅನುಮೋದಿಸುತ್ತದೆಯೋ ಸ್ಪಷ್ಟವಾಗಲಿಲ್ಲ.

ಆಧುನಿಕ ವಿಜ್ಞಾನವೂ ಇದೇ ಪ್ರತಿಪಾದಿಸುತ್ತದೆ. ಇದನ್ನು cosmological model of the universe ಎಂದು ಕರೆಯುತ್ತಾರೆ. universe is finite and expanding.

ಆಕಾಶ ಹಿಗ್ಗುತ್ತಾ ಹೋಗುವುದು ಎಂದರೆ ಅದನ್ನೊಂದು ಬಲೂನಿನಂಥ ವಸ್ತು ಎಂದು ಭಾವಿಸಬೇಕು. ಅದು ಹಿಗ್ಗುತ್ತಾ ಹೋದಂತೆ ಅದರ ಒಳಗಿನ, ಮೇಲ್ಮೈನ ಬಿಂದುಗಳೆಲ್ಲ ಪರಸ್ಪರ ದೂರ ಸರಿಯುತ್ತವೆ ಎಂದಂತೆ, ಸಹಜವಾಗಿಯೇ ತಾರೆಗಳೂ ಕೂಡ ಆಕಾಶದಲ್ಲಿಯೇ ಇರುವ ಕಾರಣ ಅವೂ ಕೂಡ ದೂರ ಸರಿಯಬೇಕು, ಹೌದು ತಾನೆ.

ಹೌದು.

ಅದು ಹೌದಾದರೆ ಜೊತೆಗೇ ಮತ್ತೊಂದು ಪ್ರಶ್ನೆ ಎದುರಾಗುತ್ತದೆ. ಆಕಾಶ ಹಿಗ್ಗುವುದೆಂದಾದರೆ ಆಕಾಶದ ಹೊರತಾದ ಸ್ಥಳಾವಕಾಶವೊಂದಿಷ್ಟಿರಬೇಕು. ಇಲ್ಲವಾದರೆ ಆಕಾಶ ಹಿಗ್ಗುವುದಾದರೂ ಎಲ್ಲಿಗೆ ?

ಇಲ್ಲಿ ಸ್ಥಳವೇ ಹಿಗ್ಗುತ್ತಿದೆ. ವಸ್ತುಗಳಿಗೂ ಮೀರಿದ ಪರಿಕಲ್ಪನೆ ಬೇಕಾಗುತ್ತದೆ ಇದನ್ನು ಕಲ್ಪಿಸಿಕೊಳ್ಳಲು. ಅದಕ್ಕೆ ಸಹಾಯವಾಗಲಿ ಎಂದು ಕೆಳಗೆ ಎರಡು ಲಿಂಕುಗಳನ್ನು ನೀಡುತ್ತಿದ್ದೇನೆ. ಈ ಪ್ರಶ್ನೆಗೆ ಮತ್ತು ಇದರಿಂದ ಮುಂದಕ್ಕೆ ಇರುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ಎರಡು ಲಿಂಕುಗಳಲ್ಲಿದೆ.
http://hyperphysics.phy-astr.gsu.edu/hbase/astro/hubble.html.

http://archive.ncsa.uiuc.edu/Cyberia/Cosmos/ExpandUni.html

ನನ್ನ ಕಾಮೆಂಟಿನಿದ ನೀವು ಎತ್ತಿಕೊಂಡ ಕೊನೆಯ ಸಾಲನ್ನು ಅದರ ಸಂದರ್ಭದಿಂದ ಪ್ರತ್ಯೇಕಿಸಿದ್ದೀರಿ ಎನ್ನಿಸುತ್ತದೆ. "ನಾವು ಕಾಣುವ ಅಸ್ತಿತ್ವ"ವೆಂದರೆ ನಮ್ಮ ಚರ್ಮಚಕ್ಷುಗಳಿಗೆ ಗೋಚರವಾಗುವಂತದ್ದು ಎಂದು ನನ್ನ ಅರ್ಥವಲ್ಲ, ವಿಜ್ಞಾನ ತಂತ್ರಜ್ಞಾನದ ಸಹಾಯದಿಂದ ನಾವು ಏನೇನು ಬಲ್ಲೆವೋ ಅದೆಲ್ಲವೂ, ತಾರೆ, ನಕ್ಷತ್ರಪುಂಜ, ನೀಹಾರಿಕೆ, ಕಪ್ಪುರಂಧ್ರ... ಉಳಿದುದೆಲ್ಲ, ನಮ್ಮ ಗ್ರಹಿಕೆಗೆ ನಿಲುಕಿರುವುದೆಲ್ಲವೂ. ಆ ವಾಕ್ಯವನ್ನು ಹೇಳುವಲ್ಲಿ ನನ್ನ ಅರ್ಥವಿಷ್ಟೇ - ನಮ್ಮ ಗ್ರಹಿಕೆಗೆ ನಿಲುಕಿರುವಷ್ಟು ಜಗತ್ತಷ್ಟು ಮಾತ್ರ ಮಹಾಸ್ಫೋಟಕ್ಕೆ ಪಕ್ಕಾಗಿರಬಹುದೇನೋ, ಆಕಾಶದ ಇನ್ನಾವುದೋ ಭಾಗದಲ್ಲಿ ಇನ್ನೂ ಅನೇಕ ಮಹಾಸ್ಫೋಟಗಳೋ ಮಹಾಕುಸಿತಗಳೋ ಸಂಭವಿಸುತ್ತಿರಬಹುದು. ಹೋಗಲಿ, ನಮ್ಮ ಅವಗಾಹನೆಗೆ ನಿಲುಕಿರುವಷ್ಟು ಮಾತ್ರವೇ ವಸ್ತುಜಗತ್ತು, ಇದರಂತೆ ಮತ್ತೊಂದು ಎಲ್ಲೂ ಇಲ್ಲ, ಮತ್ತದು ವ್ಯಾಕೋಚನಗೊಳ್ಳುತ್ತಿದೆ ಎಂದಿದ್ದರೂ ಸ್ವಲ್ಪಮಟ್ಟಿಗೆ ತಡ್ಕೋಬಹುದಿತ್ತು. ಅದನ್ನು ಬಿಟ್ಟು ಆಕಾಶವನ್ನೇ ಸಾಂತಗೊಳಿಸುವ ಸಾಹಸಕ್ಕೆ ಕೈಹಾಕಿದ್ದಾದರೂ ಏಕೆ, ಈ ತಥಾಕಥಿತ ವಿಜ್ಞಾನಿಗಳು?

ಈ ಪ್ರಶ್ನೆಯನ್ನು ವಿಜ್ಞಾನಿಗಳು ಖಂಡಿತಾ ಪರಿಗಣಿಸಿದ್ದಾರೆ. ಆಕಾಶ ಸಾಂತವಾಗಲು ಈ ಪೂರ್ಣವಿಶ್ವದ ಸಾಂದ್ರತೆ ಮತ್ತು ಎಂಟ್ರೋಪಿ ಎಂಬ ವಿಚಾರಗಳಿಂದ. ಇದನ್ನು ಆ ಲಿಂಕ್ ನಲ್ಲೇ ನೀಡಿದ್ದಾರೆ. ಒಮ್ಮೆ ನೋಡಿಬಿಡಿ.

sunaath said...

"ಅದು ಹೌದಾದರೆ ಜೊತೆಗೇ ಮತ್ತೊಂದು ಪ್ರಶ್ನೆ ಎದುರಾಗುತ್ತದೆ. ಆಕಾಶ ಹಿಗ್ಗುವುದೆಂದಾದರೆ ಆಕಾಶದ ಹೊರತಾದ ಸ್ಥಳಾವಕಾಶವೊಂದಿಷ್ಟಿರಬೇಕು. ಇಲ್ಲವಾದರೆ ಆಕಾಶ ಹಿಗ್ಗುವುದಾದರೂ ಎಲ್ಲಿಗೆ ?"

ಈ blogನಲ್ಲಿ ಪ್ರಶ್ನೆಗೆ ಉತ್ತರ ಕೊಡುವ ಅಧಿಕಾರ ನನಗೆ ಇಲ್ಲದೇ ಹೋದರೂ ಸಹ,ಐನ್‌ಸ್ತೈನ್‌ರ ಸಾಪೇಕ್ಷಸಿದ್ಧಾಂತದ ಅರ್ಥವನ್ನು ಓರ್ವರು ತಿಳಿಸಿದ್ದು ಇಲ್ಲಿ relevant ಆಗಬಹುದು:
There is space only when there are two objects. There is no space when there is no object.

ಈ ವಿವರಣೆ ಸರಿಯೆ?

Lakshmi Shashidhar Chaitanya said...

@sunaath:

ಪ್ರಶ್ನೆಗೆ ಉತ್ತರ ಕೊಡಲು ಯಾರಿಗೂ ಅಧಿಕಾರ ಯಾರೂ ಕೊಡಬೇಕಿಲ್ಲ :). ಚರ್ಚೆಗೆ ಇಲ್ಲಿ ಎಲ್ಲರಿಗೂ ಅಧಿಕಾರವಿದೆ, ಸ್ವಾಗತವಿದೆ.

ನಿಮ್ಮ ವಿವರಣೆ ಸರಿಯಿಲ್ಲವೆಂದು ನನ್ನ ಅಭಿಪ್ರಾಯ. ನಿಮಗೊಂದು ಉದಾಹರಣೆ ಕೊಡುವ ಮೂಲಕ ನನ್ನ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳಲು ಇಚ್ಛಿಸುತ್ತೇನೆ.

ಒಂದು ಖಾಲಿ ನಿವೇಶನ ತೆಗೆದುಕೊಳ್ಳಿ. ಅದನ್ನ ಸ್ಥಳ (space) ಅಂತ ಇಟ್ಟುಕೊಳ್ಳೋಣ.ಅಲ್ಲಿ ಮನೆ (object ) ಇಲ್ಲದಿದ್ದರೆ ಆ ನಿವೇಶನಕ್ಕೆ ಅಸ್ಥಿತ್ವವೇ ಇಲ್ಲವೇ ? ಇದೆ ತಾನೆ ? ಆದ್ದರಿಂದ, ಸ್ಥಳವು ಯಾವ ವಸ್ತುವನ್ನು ಅವಲಂಬಿಸಿರುವುದಿಲ್ಲ,ಆದರೆ ವಸ್ತುವು ಸ್ಥಳವನ್ನು ಅವಲಂಬಿಸಿರುತ್ತದೆ. ಇದು ಸಾಪೇಕ್ಷ ಸಿದ್ಧಾಂತದ ಅತಿ ಸುಲಭದ ವಿವರಣೆ. ಈಗ ನಮ್ಮದೊಂದು ಮನೆ ಇದೆ ಅಂದರೆ ಜನರು "ಎಲ್ಲಿ ?" ಎಂದು ಜಾಗದ ಬಗ್ಗೆ ಕೇಳುತ್ತಾರೆ. ಆದ್ದರಿಂದ ಈ ಉದಾಹರಣೆಯಲ್ಲಿ ವಸ್ತುವು ಸ್ಥಳವನ್ನು ಅವಲಂಬಿಸಿರುತ್ತದೆ ಅಥವಾ ಅಪೇಕ್ಷಿಸುತ್ತದೆ.ಒಂದು ವಸ್ತುವಿನ ವಿವರ ಬೇರೊಂದು ವಸ್ತುವನ್ನೋ, ಅಥವಾ ಅದಿರುವ ಸ್ಥಳವನ್ನೋ ಅವಲಂಬಿಸಿಯೇ ಇರುತ್ತದೆ .ಇಲ್ಲಿ ಯಾವುದೂ absolute ಅಥವಾ ಖಡಾಖಂಡಿತವಲ್ಲ. ಸ್ಥಳ ಬದಲಾದಂತೆ ವಸ್ತುವಿನೊಂದಿಗಿನ ಅದರ ಸಂಬಂಧವೂ ಬದಲಾಗುತ್ತದೆ. ಆದ್ದರಿಂದಲೇ ಇದನ್ನು ಸಾಪೇಕ್ಷ ಸಿದ್ಧಾಂತ ಎಂದು ಕರೆಯುವುದು.ಸಾಪೇಕ್ಷ ಸಿದ್ಧಾಂತದಲ್ಲಿ ಹೀಗೆ ಯಾವುದಾದರೂ ಒಂದನ್ನು (ವಸ್ತು ಅಥವಾ ಸ್ಥಳ ) ಆಧಾರವಾಗಿಟ್ಟುಕೊಂಡು, ಅದರೊಂದಿಗೆ ಚಲಿಸುವ ಅಥವಾ ಆಧಾರಿಕ್ಕಿಂತ ಭಿನ್ನ ವಸ್ತುಗಳ ವಿಶ್ಲೇಷಣೆ ನಡೆಸಲಾಗುತ್ತದೆ. ಈ ಆಧಾರವನ್ನು ಆಂಗ್ಲದಲ್ಲಿ frame of reference ಎಂದು ಕರೆಯುತ್ತಾರೆ. ವಸ್ತುವಿಗಿಂತ ಸ್ಥಳವನ್ನು ನಾವು ಬಹಳ ಸುಲಭವಾಗಿ ಆಧಾರವನ್ನಾಗಿ ಇಟ್ಟುಕೊಳ್ಳಬಹುದಾದ್ದರಿಂದ ಸ್ಥಳಕ್ಕಿಲ್ಲಿ ಹೆಚ್ಚು ಮಹತ್ವವಿದೆ.ಸ್ಥಳಕ್ಕೆ ಎರಡು, ಅಥವಾ ಮೂರು ಆಯಾಮಗಳಿರಬಹುದು. ಎರಡೂ ಆಯಾಮದ ಸ್ಥಳವೆಂದರೆ ಗೋಡೆ, ಮೂರು ಆಯಮ ಉಳ್ಳ ಸ್ಥಳವೆಂದರೆ ನಮ್ಮದೇ ಭೂಮಿ !

ವಸ್ತುವಿರಲಿ ಬಿಡಲಿ ಸ್ಥಳ ಇದ್ದೇ ಇರುತ್ತದೆ. ಪ್ರಪಂಚದಲ್ಲಿ ಇಂತಹಾ ಶೂನ್ಯ ಸ್ಥಳಗಳು ಬೇಕಾದಷ್ಟಿವೆ. ಅಲ್ಲಿ ಯಾವ ವಸ್ತುವೂ ಇಲ್ಲ. ಹಾಗೆಂದು ಸ್ಥಳಾವಕಾಶವೇ ಇಲ್ಲವೆನ್ನುವುದು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ.

Unknown said...

"ವಸ್ತುವಿರಲಿ ಬಿಡಲಿ ಸ್ಥಳ ಇದ್ದೇ ಇರುತ್ತದೆ. ಪ್ರಪಂಚದಲ್ಲಿ ಇಂತಹಾ ಶೂನ್ಯ ಸ್ಥಳಗಳು ಬೇಕಾದಷ್ಟಿವೆ. ಅಲ್ಲಿ ಯಾವ ವಸ್ತುವೂ ಇಲ್ಲ. ಹಾಗೆಂದು ಸ್ಥಳಾವಕಾಶವೇ ಇಲ್ಲವೆನ್ನುವುದು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ"

ನಿಮ್ಮ ಅಭಿಪ್ರಾಯ ಹಿಂದಿನ ಕಾಮೆಂಟುಗಳಲ್ಲಿ ಸಮರ್ಥಿಸಿಕೊಂಡಂತಿಲ್ಲದೆ, ಭಿನ್ನ ರೂಪ ತಾಳಿದೆಯಲ್ಲ ಇಲ್ಲಿ?
-ಅಆಇಈ

Lakshmi Shashidhar Chaitanya said...

@bang/ಅಆಇಈ

ಮೊದಲಿನ ಪ್ರಶ್ನೆ ಸ್ಥಳದ ಹಿಗ್ಗುವಿಕೆಯ ಕುರಿತಾಗಿತ್ತು. ಸ್ಥಳ ಹಿಗ್ಗಲು ಸ್ಥಳಬೇಕಲ್ಲವೇ ಎಂದು ಪ್ರಶ್ನೆಯಾಗಿತ್ತು. ಸ್ಥಳಾವೇ ಹಿಗ್ಗುತ್ತಿದೆ ಎಂಬ ಉತ್ತರವಿತ್ತು ಅಲ್ಲಿ.

ಆದರೆ ಇಲ್ಲಿ ಪ್ರಶ್ನೆ ವಸ್ತು ಮತ್ತು ಸ್ಥಳದ ಅಸ್ತಿತ್ವದ ಕುರಿತದ್ದು. ಅದಕ್ಕೆ ಈ ಉತ್ತರ ಸರಿಯಿದೆ ಅನ್ನಿಸಿತು. ನಿಮಗೆ ಸರಿಅನ್ನಿಸದಿದ್ದುದರ ಕಾರಣ ತಿಳಿಸಿ ದಯವಿಟ್ಟು.ಹಾಗೆಯೇ ನಿಮ್ಮ ಅಭಿಪ್ರಾಯ ಕೂಡಾ.

ಅಂತರ್ವಾಣಿ said...

Good explanation

Shashanka G P (ಉನ್ಮುಖಿ) said...

@[ಇಲ್ಲಿ ಸ್ಥಳವೇ ಹಿಗ್ಗುತ್ತಿದೆ. ವಸ್ತುಗಳಿಗೂ ಮೀರಿದ ಪರಿಕಲ್ಪನೆ ಬೇಕಾಗುತ್ತದೆ ಇದನ್ನು ಕಲ್ಪಿಸಿಕೊಳ್ಳಲು. ಅದಕ್ಕೆ ಸಹಾಯವಾಗಲಿ ಎಂದು ಕೆಳಗೆ ಎರಡು ಲಿಂಕುಗಳನ್ನು ನೀಡುತ್ತಿದ್ದೇನೆ. ಈ ಪ್ರಶ್ನೆಗೆ ಮತ್ತು ಇದರಿಂದ ಮುಂದಕ್ಕೆ ಇರುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ಎರಡು ಲಿಂಕುಗಳಲ್ಲಿದೆ. http://hyperphysics.phy-astr.gsu.edu/hbase/astro/hubble.html, http://archive.ncsa.uiuc.edu/Cyberia/Cosmos/ExpandUni.html]

ಎರಡೂ ಕೊಂಡಿಗಳನ್ನು ಜಾಲಾಡಿದೆ. ಮೊದಲನೇ ಕೊಂಡಿಯಲ್ಲಿ ನನಗೆ ಸಿಕ್ಕಿದ್ದಿಷ್ಟು -
"For one thing, it means that no matter which galaxy we happen to be in, virtually all of the other galaxies are moving away from us (the exceptions are at the local level: gravitational attraction pulls neighboring galaxies, such as Andromeda and the Milky Way, closer together). In other words, it's not as though we here on earth are at the center of the universe and everything else is receding from us. The universe has no "edge" as such."

ಬಹುಶಃ ಈ ಕೆಳಗಿನ ವಾಕ್ಯವನ್ನು ಅರ್ಥೈಸುವಲ್ಲಿ, ಅಯಾಚಿತವಾಗಿ ಆಕಾಶಕ್ಕೆ ಅಂತ್ಯವಿರಬಹುದು ಎಂಬ ನಿರ್ಣಯಕ್ಕೆ ನೀವು ಬಂದಿರಲಿಕ್ಕೂ ಸಾಕು. ವಿಜ್ಞಾನ ಇದನ್ನು ಅನುಮೋದಿಸುವುದು ಎಂದು ಭಾವಿಸಲು ಕಾರಣವಿಲ್ಲ.
"It also means that the galaxies are not moving away through space, they are moving away with space, as space itself expands. Think of a loaf of unbaked raisin bread you've set in a warm place to rise. The raisins are like galaxies or clusters of galaxies, and the dough, space. As the dough rises, the raisins move farther apart, but they've moved with the dough, not through the dough."
ಆಕಾಶ ಹಿಗ್ಗುತ್ತಿದೆ ಎಂದ ಮಾತ್ರಕ್ಕೆ ಅದಕ್ಕೆ ಅಂತ್ಯವಿರಲೇಬೇಕು ಎಂಬ ನಿರ್ಣಯಕ್ಕೆ ಬರಲಾಗದು. ಉದಾಹರಣೆಗೆ - ನಿಮ್ಮ ಎಡಕ್ಕೂ ಬಲಕ್ಕೂ ಅನಂತವಾಗಿ ಚಾಚಿಕೊಂಡಿರುವ ರಬ್ಬರಿನ ನೂಲೊಂದನ್ನು ಕಲ್ಪಿಸಿಕೊಳ್ಳಿ. ಮಧ್ಯದಲ್ಲೆಲ್ಲೋ 10 cmನಷ್ಟು ರಬ್ಬರನ್ನು ಹಿಡಿದು ಅದನ್ನು ಹಿಗ್ಗಿಸಬಹುದು ಅಥವಾ ಸಾಧ್ಯವಿದ್ದರೆ ಕುಗ್ಗಿಸಬಹುದು. ಆ ನಮ್ಮ ಕ್ರಿಯೆ ರಬ್ಬರಿನ ನೂಲಿನ ಅನಂತತೆಯನ್ನೇನೂ ನಷ್ಟಗೊಳಿಸುವುದಿಲ್ಲ ಅಲ್ಲವೇ. ಹಾಗೆಯೇ ಆಕಾಶ ಕೂಡ. ಹೆಚ್ಚೆಂದರೆ ಆಕಾಶದ coordinates ಪರಸ್ಪರ ದೂರ ಸರಿಯುತ್ತಿರಬಹುದು. ಅದೇನಾದರಾಗಲಿ, ಆಕಾಶದ ಅನಂತತೆಗೇನೂ ಅದರಿಂದ ಧಕ್ಕೆಯಿಲ್ಲ. ನೆನಪು ಮಾಡಿಕೊಳ್ಳಿ -
ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ|
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವ ಅವಶಿಷ್ಯತೇ||
"ಅದು ಪೂರ್ಣ, ಇದು ಪೂರ್ಣ, ಪೂರ್ಣದಿಂದ ಪೂರ್ಣ ಉಂಟಾಗುತ್ತದೆ, ಪೂರ್ಣದಿಂದ ಪೂರ್ಣವನ್ನು ತೆಗೆದು ಹಾಕಿದರೆ ಪೂರ್ಣವೇ ಉಳಿಯುತ್ತದೆ" [ವಿಜಯ ಕರ್ನಾಟಕದ ’ಬಿಸಿಲು ಬೆಳದಿಂಗಳು’ - ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ]

ಇಷ್ಟಾಗಿಯೂ ಇದನ್ನು ಒಪ್ಪದಿರುವಿರಾದರೆ, ಈ ಮೂರು ಪ್ರಶ್ನೆಗಳಿಗೆ ಉತ್ತರವೀಯುವುದು ಅಗತ್ಯ -

1. ಆಕಾಶ ಸಾಂತವಾಗಿದ್ದರೆ, ಅದರ ಗಾತ್ರ (Volume) ಎಷ್ಟು, m3ಗಳಲ್ಲಿ? ಪ್ರಾಯೋಗಿಕವಾಗಿ ತಕ್ಷಣ ಸಾಬೀತುಪಡಿಸುವುದಕ್ಕಾಗದಿದ್ದರೂ ಕನಿಷ್ಟ ಒಂದು ಊಹನೆಯನ್ನಾದರೂ ಕೊಡಬೇಕಾಗುತ್ತದೆ theoritically!
2. ಆಕಾಶ ಸಾಂತವಾಗಿದ್ದರೆ ಅದರ ಗಡಿ ಹೇಗಿದೆ? ಅದರ ಗುಣ ಲಕ್ಷಣಗಳೇನು? ಅದು ಯಾವುದರಿಂದ ನಿರ್ಮಿತವಾಗಿದೆ? ಖಚಿತ ಉತ್ತರವಿಲ್ಲದಿದ್ದರೂ ಒಂದು predictionಅನ್ನು ಕೊಡಬೇಕಾಗುತ್ತದೆ.
3. ಆಕಾಶದ ಆಕಾರವೇನು? ಸಾಂತವಾದುದೆಲ್ಲಕ್ಕೂ ಒಂದು ಆಕಾರವಿರಬೇಕು, ದ್ರವ/ಅನಿಲದಂತೆ ತಾತ್ಕಾಲಿಕವಾದದ್ದಾದರೂ ಸರಿಯೇ.
4. ಆಕಾಶದ ಗಡಿಯನ್ನು ಸೀಳಿಕೊಂಡು ಹೋದರೆ ಏನು ಸಿಗುತ್ತದೆ? ಏಕೆಂದರೆ shape invariably implies a boundary. ಈ ಪ್ರಶ್ನೆಗೆ ತಾರ್ಕಿಕ ಆಧಾರವೂ ಇದೆ. ಯಾವುದೇ ಗಡಿಯು ನಿರ್ಧಾರವಾಗುವುದು ಎರಡು ವಸ್ತು/ಸಂಗತಿಗಳ ಮೇಲೆ. ಒಂದೇ ವಸ್ತು/ಸಂಗತಿಯಿದ್ದರೆ ಗಡಿ ಇರಲಿಕ್ಕೆ ಸಾಧ್ಯವಿಲ್ಲ. ನಾವು ವಸ್ತುವೊಂದರ ಗಡಿಯನ್ನು ಗುರುತಿಸಬಹುದು, ಯಾಕೆ, ಇಲ್ಲಿ ವಸ್ತು ಮತ್ತು ಅವಕಾಶ ಎಂಬ ಭಿನ್ನ ಸಂಗತಿಗಳು ಇವೆಯಾದ್ದರಿಂದ. ಒಂದು electron ಇದೆಯೆಂದು ನಾವು ಹೇಗೆ ಹೇಳುತ್ತೇವೆ? Electron ಒಂದು ವಸ್ತು, ಅದರ ಹೊರಗಡೆ ವಸ್ತುವಲ್ಲದ ಅವಕಾಶವಿದೆ, ಹಾಗಾಗಿ ಅದಕ್ಕೊಂದು ಆಕಾರ, ಗಾತ್ರ, ಗಡಿ ಇದೆಯೆಂದು ನಾವು ಹೇಳುತ್ತೇವೆ. ಸ್ವಲ್ಪ ಯೋಚಿಸಿ ನೋಡಿ, ಕನಿಷ್ಟ ಎರಡರ ವಿನಃ ಆಕಾರ, ಗಾತ್ರ, ಗಡಿ ಇರಲಾರದು. ಇದನ್ನೇ ವಿಶಿಷ್ಟಾದ್ವೈತದ ಭಾಷೆಯಲ್ಲಿ "ನಾಮ, ರೂಪ, ಭೇದ" ಎನ್ನುವುದು.


@ Sunaath [There is space only when there are two objects. There is no space when there is no object]

ಅದ್ವೈತದ ಪ್ರಕಾರ ಹೌದು. ಆದರೆ ಈ ವಾಕ್ಯವನ್ನು ಸ್ವಲ್ಪ ಪರಿಷ್ಕರಿಸಬೇಕಾಗುತ್ತದೆ. ಕನಿಷ್ಟ ನಾಲ್ಕು non-coplanar ಬಿಂದುಗಳಿದ್ದರೂ ಸಾಕು ಈ ವಿಶ್ವದಲ್ಲಿ, ನೀವು ಅವಕಾಶವನ್ನು define ಮಾಡಬಹುದು. ಕೇವಲ (absolute) ಸ್ಥಳವನ್ನು (space), ವಸ್ತುವಿನ ಹೊರತಾಗಿ define ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತದೆ ಅದ್ವೈತ. ಹೇಗಿದು? ವಿಶ್ವದಲ್ಲಿ ಯಕಶ್ಚಿತ್ ಒಂದೇ ಒಂದು ವಸ್ತುವಿದ್ದರೂ ಅದರ ಮೇಲೆ ನಾಲ್ಕು non-coplanar ಬಿಂದುಗಳನ್ನು ಗುರುತಿಸಲು ಸಾಧ್ಯವಿದೆ. ಅದರ ಆಧಾರದ ಮೇಲೆ, ಒಂದು ಏಕಮಾನವನ್ನು ನಿರ್ಧರಿಸಿ ಯಾವ ದಿಕ್ಕಿಗೆ ಬೇಕಾದರೂ ಅಳೆಯಬಹುದು, ವಸ್ತುವಿನ ಒಳಕ್ಕಾಗಲೀ ಹೊರಕ್ಕಾಗಲೀ. ವಸ್ತುವಿಗೆ ಹೋಲಿಸಿದಂತೆ ಮಾತ್ರ ಆಕಾಶಕ್ಕೆ ಅಸ್ತಿತ್ವ. ಆಧುನಿಕ ವಿಜ್ಞಾನ ಇದನ್ನು ಒಪ್ಪುವುದೋ ಇಲ್ಲವೋ ಗೊತ್ತಿಲ್ಲ. ಆದರೂ ಮನಸ್ಸಿನಲ್ಲಿ ಏನೋ ಒಂದು ಅನುಮಾನ ಅಲ್ವೇ? ನಾವು ವಸ್ತುವಿನ ಹೊರತಾದ ಆಕಾಶದ ಕಲ್ಪನೆ ಮಾಡಿಕೊಳ್ಳುವಾಗ, ವೀಕ್ಷಕರಾಗಿ ನಾವು ಇದ್ದೇ ಇರುತ್ತೇವೆ. ಹಾಗಾಗಿ ಆಕಾಶದ ಕಲ್ಪನೆ ಸಾಧುವಾಗುತ್ತದೆ. ವಸ್ತು ಮತ್ತು ಆಕಾಶ ಇವೆರಡರಲ್ಲಿ ಯಾವುದು ಮೂಲ ಎಂದು ಹೇಳಲಾಗದು. ಎರಡೂ ಪರಸ್ಪರ ಸಂಬಂಧಿಸಿದಂತೆ ಮಾತ್ರ ಇವೆ, ಒಂದಿಲ್ಲದೆ ಮತ್ತೊಂದು ಇರಲಾರದು ಎಂದು ಅಭಿಪ್ರಾಯಪಡುತ್ತದೆ ಅದ್ವೈತ.

@ [ಆಕಾಶ ಸಾಂತವಾಗಲು ಈ ಪೂರ್ಣವಿಶ್ವದ ಸಾಂದ್ರತೆ ಮತ್ತು ಎಂಟ್ರೋಪಿ ಎಂಬ ವಿಚಾರಗಳಿಂದ]
Hyperphysicsನ ಕೊಂಡಿಯ ಪ್ರಕಾರ ಪ್ರಸ್ತುತ ವಿಶ್ವ Critical densityಗಿಂತ ಸ್ವಲ್ಪವೇ ಕಡಿಮೆ ಸಾಂದ್ರತೆಯನ್ನು ಹೊಂದಿರುವ ಕಾರಣ ಅದು ನಿಧಾನಗತಿಯಲ್ಲಿ ವ್ಯಾಕೋಚನಗೊಳ್ಳುತ್ತಿದೆ. ಮತ್ತದು ನಿಲ್ಲುವ ಸಾಧ್ಯತೆ ಇಲ್ಲ ಏಕೆಂದರೆ ವ್ಯಾಕೋಚನವಾದಂತೆಲ್ಲ ಸಾಂದ್ರತೆ ಕಡಿಮೆಯಾಗುತ್ತದೆಯೇ ಹೊರತು ಗುರುತ್ವ ಮಾತ್ರ ಒಂದೇ ಸಮನಾಗಿ ಇರುತ್ತದೆ. ಮತ್ತೆ, ನಾವು ಓದಿರುವ thermodynamic ವಿವರಣೆಯ entropyಗೆ ಬಂದರೆ ಪ್ರಾರಂಭದಲ್ಲಿ ವಿಶ್ವ ಅತಿ ಕಡಿಮೆ entropy stateನಲ್ಲಿ ಇತ್ತು. ಆದರೆ "low-entropy states are short-lived" ಹಾಗಾಗಿ ವಿಶ್ವ ತನ್ನ entropyಯನ್ನು ಹೆಚ್ಚಿಸಿಕೊಳ್ಳುವತ್ತ ಸಾಗುತ್ತಿದೆ. ಅದರ ಪರಿಣಾಮವೇ Big bang ಎಂದು ಓದಿದ ನೆನಪು. ಇದನ್ನೆಲ್ಲ ನೋಡಿದರೆ ವಿಜ್ಞಾನಿಗಳು ಅದೇನು Universe ಎಂದು ಕರೆಯುತ್ತಿದ್ದಾರೋ ಅದು ಕೇವಲ ವಸ್ತುಜಗತ್ತು (matter) ಮತ್ತು ಅದಕ್ಕೆ ಮಾತ್ರ ಹೊಂದಿಕೊಂಡತಿರುವ ಸೀಮಿತ ಸ್ಥಳಾವಕಾಶದ ಮಾನಬಿಂದುಗಳು (coordinates) ಮಾತ್ರ.

ಇದಲ್ಲದೆ ನೀವು ಕೊಟ್ಟ ಎರಡು linkಗಳನ್ನು ಓದುವಾಗ ಅವು ಒಂದಷ್ಟು ಅನುಮಾನಗಳನ್ನು ಹುಟ್ಟು ಹಾಕಿವೆ -
"Nothing is absolute in this universe except the velocity of light" ಎನ್ನುವುದೊಂದು ಸಾಪೇಕ್ಷತಾ ಸಿದ್ಧಾಂತದ ಮೂಲ ಪರಿಕಲ್ಪನೆ. ನನಗೆ ತಿಳಿದಂತೆ, ಈ ವಿಷಯವನ್ನು ಸಾಧಿಸುವುದಕ್ಕಾಗಿ ಅವಕಾಶ ಮತ್ತು ಕಾಲವನ್ನು ಬೇಕಾಬಿಟ್ಟಿ ಹಿಗ್ಗಿಸುವುದು ಕುಗ್ಗಿಸುವುದು ಮಾಡುತ್ತಾರೆ. ಒಮ್ಮೆ planetariumಗೆ ಹೋಗಿದ್ದಾಗ, ಐನ್ಸ್ಟೈನ್ ಸಿದ್ಧಾಂತಗಳ ಪರಿಚಯ ಮಾಡಿಕೊಟ್ಟರು. ಬೆಳಕಿನ ವೇಗ ನಿರಪೇಕ್ಷವಾದುದು ಎಂದು ಸಾಬೀತುಪಡಿಸುವ ಪ್ರಯೋಗವೊಂದನ್ನು ಉಲ್ಲೇಖಿಸಿದರು, ನನಗೆ ಅದರ ಪ್ರಯೋಗಕರ್ತರ ಹೆಸರು ನೆನಪಿಲ್ಲ. ಪರಸ್ಪರ ಪ್ರದಕ್ಷಿಸುವ ಅವಳಿ ನಕ್ಷತ್ರಗಳನ್ನು (twin stars) ನಾವು ಬಲ್ಲೆವು. ಭೂಮಿಯಿಂದ ಗಮನಿಸಿದಾಗ, ಒಂದು ನಮ್ಮಿಂದ ದೂರ ಸರಿಯುತ್ತಿರುವಂತೆ ಮತ್ತೊಂದು ಹತ್ತಿರ ಬರುತ್ತಿರುವಂತಿರುವ ಎರಡು ಅವಳಿ ನಕ್ಷತ್ರಗಳನ್ನು (twin stars) ಗುರುತಿಸಿ, ಅವುಗಳಿಂದ ಬರುತ್ತಿರುವ ಬೆಳಕನ್ನು ಪ್ರತ್ಯೇಕಿಸಿ ಅವುಗಳ ವೇಗ ಅಳೆದಾಗ ಬೆಳಕಿನ ವೇಗ ಎರಡೂ ಸನ್ನಿವೇಶಗಳಲ್ಲಿ ಒಂದೇ ಇರುವುದು ಸಾಬೀತಾಯಿತು.
ಹುಂ, ಇನ್ನು big bangಗೆ ಬಂದರೆ, ಡಾಪ್ಲರ್ ಪರಿಣಾಮದಿಂದುಟಾಗುವ ರಕ್ತವರ್ಣಪಲ್ಲಟವೇ ಆ ಮಹಾಸ್ಫೋಟಕ್ಕೆ ಸಾಕ್ಷಿ. "v = Hor" ಸೂತ್ರದ ಪ್ರಕಾರ ವಸ್ತುಗಳ ಚಿಮ್ಮುವಿಕೆಯ ತತ್ಕಾಲೀನ ವೇಗವು (instantaneous velocity) ಅವು ನಮ್ಮಿಂದ ಇರುವ ದೂರದ (displacement) ನೇರ ಅನುಪಾತದಲ್ಲಿದೆ (directly proportional). ವಸ್ತು ನಮ್ಮಿಂದ ದೂರ ಸರಿದಂತೆಲ್ಲ ಅದರ ವೇಗ ವರ್ಧಿಸಬೇಕು. ನಕ್ಷತ್ರಗಳು ವೇಗೋತ್ಕರ್ಷಗೊಳ್ಳುತ್ತಿರುವುದು (accelerate) ನಿರ್ವಿವಾದ, ಇಲ್ಲವಾದರೆ, ಸ್ಥಿರ ವೇಗದಲ್ಲಿ (constant velocity) ನಕ್ಷತ್ರಗಳು ಚಲಿಸುತ್ತಿದ್ದರೆ reference spectrumನಿಂದ ಸ್ವಲ್ಪ ಭಿನ್ನತೆಯನ್ನು ತಾಳಿದ ಯಾವುದೋ ಒಂದು ನಿಶ್ಚಿತ ರೋಹಿತ ಮಾದರಿಯೇ ಯಾವಾಗಲೂ ಇರುತ್ತದೆ, ಇಂಥಾ ಸ್ಥಿತಿಯಲ್ಲಿ ರಕ್ತವರ್ಣಪಲ್ಲಟವು ಅಸಾಧ್ಯ.
ಇಲ್ಲಿ ಪ್ರಶ್ನೆಯಿಷ್ಟೆ, ಮೇಲಿನೆರಡು ಪ್ಯಾರಾಗಳು ಪರಸ್ಪರ ವಿರೋಧಾಭಾಸಕ್ಕೆ ಎಡೆ ಮಾಡಿಕೊಡುತ್ತಿವೆ. ಬೆಳಕಿನ ವೇಗ ನಿರಪೇಕ್ಷವೆಂದ ಮೇಲೆ Doppler effect ಹೇಗೆ ಸಾಧ್ಯ? Doppler effect ಸಾಧ್ಯವಿಲ್ಲವೆಂದ ಮೇಲೆ, ರಕ್ತವರ್ಣ ಪಲ್ಲಟವೂ ಸಾಧ್ಯವಿಲ್ಲ. ದಯವಿಟ್ಟು ಮತ್ಯಾವುದೋ ಲಿಂಕು ಕೊಟ್ಟು ಪ್ರಶ್ನೆ ತೇಲಿಸಬೇಡಿ, ಉತ್ತರಿಸಿ.

sunaath said...

ತತ್ವಜ್ಞಾನ ಇಲ್ಲಿ ಬಂದದ್ದರಿಂದ, ಶಂಕರಾಚಾರ್ಯರ "ದಕ್ಷಿಣಾಮೂರ್ತಿ ಸ್ತೋತ್ರ"ದ ಒಂದು ಭಾಗವನ್ನು ಇಲ್ಲಿ ಉದಾಹರಿಸುವದು ತಪ್ಪಾಗಲಿಕ್ಕಿಲ್ಲ. ಶಂಕರಾಚಾರ್ಯರು ಈ ರೀತಿ
ಹೇಳುತ್ತಾರೆ:
"ಮಾಯಾಕಲ್ಪಿತ ದೇಶ ಕಾಲ ಕಲನಾ.."
ಅಂದರೆ, space and time are virtual.
ದೇಶ(=space) ಮತ್ತು ಕಾಲ(=Time) ಇವುಗಳಿಗೆ ಸ್ವತಂತ್ರ
ಅಸ್ತಿತ್ವವಿಲ್ಲ. ಇವು ಕೇವಲ ಭ್ರಮೆ.

ಅವಕಾಶವನ್ನು ಅಳೆಯಲು ಅಥವಾ define ಮಾಡಲು ವಸ್ತುಕೇಂದ್ರ ಬೇಕು; ಕಾಲವನ್ನು ಅಳೆಯಲು ಮೂಲಘಟನೆ ಬೇಕು. ಆದುದರಿಂದ ಅವಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ.
ಐನ್‌ಸ್ಟೈನ್‌ರು ಇದನ್ನೇ ಹೇಳಿದ್ದಾರಲ್ಲವೆ?

Unknown said...

ದಯವಿಟ್ಟು ಎಲ್ಲರೂ,
ಉಲ್ಲೇಖಗಳ ಜೊತೆಗೆ ತಮ್ಮ ತಮ್ಮ ಅನುಮಾನಗಳನ್ನು/ಪ್ರಶ್ನೆಗಳನ್ನು/ಅಭಿಪ್ರಾಯಗಳನ್ನು ನೀಡಿದರೆ ಚೆನ್ನ.
ಏಕೆಂದರೆ ಹೇಳಿರುವುದನ್ನು ಹಾಗೇ ಹೇಳತೊಡಗಿದರೆ ಎರಡು ಸಾಧ್ಯತೆಗಳಿವೆ, ಒಂದು, ಹೇಳಿಕೆ ಸಂಪೂರ್ಣವಾಗಿ ಸ್ಪಷ್ಟವಾಗಿರುವುದು, ಎರಡನೆಯದು ತಿಳಿಕೊಂಡಂತೆ ಬರೀ(?) ಹೇಳುತ್ತಿರುವುದೆಂದು.
ಈ ವಿನಂತಿಯನ್ನು ತಪ್ಪಾಗಿ ತಿಳಿಯಬೇಡಿ.
-ಅಆಇಈ
Intelligence is knowing ignorance

Lakshmi Shashidhar Chaitanya said...

ಬಹುಶಃ ಈ ಕೆಳಗಿನ ವಾಕ್ಯವನ್ನು ಅರ್ಥೈಸುವಲ್ಲಿ, ಅಯಾಚಿತವಾಗಿ ಆಕಾಶಕ್ಕೆ ಅಂತ್ಯವಿರಬಹುದು ಎಂಬ ನಿರ್ಣಯಕ್ಕೆ ನೀವು ಬಂದಿರಲಿಕ್ಕೂ ಸಾಕು. ವಿಜ್ಞಾನ ಇದನ್ನು ಅನುಮೋದಿಸುವುದು ಎಂದು ಭಾವಿಸಲು ಕಾರಣವಿಲ್ಲ.

ಇಲ್ಲ, ನಾನು ಈ ವಾಕ್ಯವನ್ನು ಓದಿ ಆಕಾಶಕ್ಕೆ ಒಂದು ಅಂತ್ಯವಿದೆ ಎಂದು ಹೇಳಿಲ್ಲ.

"It also means that the galaxies are not moving away through space, they are moving away with space, as space itself expands. Think of a loaf of unbaked raisin bread you've set in a warm place to rise. The raisins are like galaxies or clusters of galaxies, and the dough, space. As the dough rises, the raisins move farther apart, but they've moved with the dough, not through the dough."
ಆಕಾಶ ಹಿಗ್ಗುತ್ತಿದೆ ಎಂದ ಮಾತ್ರಕ್ಕೆ ಅದಕ್ಕೆ ಅಂತ್ಯವಿರಲೇಬೇಕು ಎಂಬ ನಿರ್ಣಯಕ್ಕೆ ಬರಲಾಗದು.


ಹಿಗ್ಗುವಿಕೆಗೆ ಅಂತ್ಯವಿರಬೇಕು ಶಶಾಂಕ್. ಈಗ ನೋಡಿ, ನೀವು ರಬ್ಬರಿನ ಉದಾಹರಣೆ ತೆಗೆದುಕೊಂಡಿರಿ. ಇಲ್ಲಿ ಸಲ್ಪ ರಬ್ಬರನ್ನು ಹಿಗ್ಗಿಸುವುದು ಪ್ರಶ್ನೆಯಲ್ಲ, ಇಲ್ಲಿ ಹಿಗ್ಗುತ್ತಿರುವುದು ಇಡೀ ರಬ್ಬರು. ಅದು ಎಷ್ಟು ಹಿಗ್ಗಬಹುದು ? ಅದರ ಸಾಂದ್ರತೆ ತೀರ ಕಡಿಮೆಯಾಗುವವರೆಗೂ ತಾನೆ ? ಅದಾದ ಮೇಲೆ ಅದು ಕಿತ್ತುಹೋಗುತ್ತದೆ. ಹಾಗೆಯೇ ಆಕಾಶವೂ ! ಆಕಾಶ ತನ್ನ ಸಾಂದ್ರತೆ ತೀರ ಕಡಿಮೆಯಾಗುವವರೆಗೂ ಹಿಗ್ಗುತ್ತಾ ಹೋಗುತ್ತದೆ ಎಂಬ ವಾದವಿದೆ. ಅದನ್ನ ವಿಜ್ಞಾನ ಪ್ರತಿಪಾದಿಸುತ್ತದೆ ಕೂಡಾ. ಇದನ್ನು cosmological model of the universe ಎಂದು ಕರೆಯುತ್ತೇವೆ.
ಆಕಾಶದಲ್ಲಿನ ಸಮಸ್ತ ವಸ್ತು, ಕಾಯ, ಅನಿಲ, ಅಣುಪರಮಾಣುಗಳ ಲೆಕ್ಕವೇ ನಮಗಿನ್ನೂ ಸಿಕ್ಕಿಲ್ಲ ಅದರ ಸಾಂದ್ರತೆ ಕಂಡುಹಿಡಿಯಲು. ನಮಗೆ ಕಾಣಿಸದಷ್ಟು dark matter ಮತ್ತು dark energy ಇದೆ ಈ ಪ್ರಪಂಚದಲ್ಲಿ ಎನ್ನುವುದು ಈಗಾಗಲೇ ಸಾಬೀತಾಗಿರುವ ವಿಷಯ. ಆಕಾಶ ಹಿಗ್ಗುತ್ತದೆ, ಹಿಗ್ಗುತ್ತಾ ಹೋಗುತ್ತದೆ. ಈಗಿರುವ ವಾದದ ಪ್ರಕಾರ ಅತಿಸೂಕ್ಷ್ಮ ಅಣುವಾದ ನ್ಯೂಟ್ರಿನೋ (dark matter ನ ಪ್ರಮುಖಾಂಶ) ಆವಿಯಾಗಿ ಹೋಗಿ ಅಥವಾ decay ಆಗಿ ಪ್ರಪಂಚ (ನಿಮ್ಮ ಪ್ರಕಾರ ಆಕಾಶ) ಅಂತ್ಯಗೊಂಡು "nothingness"ನಲ್ಲಿ ಲೀನವಾಗುತ್ತದೆ. ಇಲ್ಲೊಂದು ಸಮಸ್ಯೆಇದೆ. ಈ ನ್ಯೂಟ್ರಿನೋ ಎಂತಹಾ ಸೂಕ್ಷ್ಮ ಅಣುವೆಂದರೆ ಇದರ ಬಗ್ಗೆ ನಮಗೆ ಹೆಚ್ಚು ತಿಳಿಯಲಾಗದೇ, ಇದನ್ನು ನಾವು ಅತಿ ಸುಲಭವಾಗಿ detect ಕೂಡಾ ಮಾಡಲಾಗದೇ ಒದ್ದಾಡುತ್ತಿದ್ದೇವೆ.ಅದರ ಲೆಕ್ಕ ಸಿಗುವ ಹೊತ್ತಿಗೆ.... !!

ಹೆಚ್ಚೆಂದರೆ ಆಕಾಶದ coordinates ಪರಸ್ಪರ ದೂರ ಸರಿಯುತ್ತಿರಬಹುದು.ಆಕಾಶದ coordinates ಬದಲಾಗುತ್ತಿರಬಹುದು...

ನಿಜ, only with respect to the earth. ಇಲ್ಲಿ ಸಾಪೇಕ್ಷ ಸಿದ್ಧಾಂತದ ಅವಶ್ಯಕತೆ ಇದೆ.

ನೆನಪು ಮಾಡಿಕೊಳ್ಳಿ -
ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ|
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವ ಅವಶಿಷ್ಯತೇ||
"ಅದು ಪೂರ್ಣ, ಇದು ಪೂರ್ಣ, ಪೂರ್ಣದಿಂದ ಪೂರ್ಣ ಉಂಟಾಗುತ್ತದೆ, ಪೂರ್ಣದಿಂದ ಪೂರ್ಣವನ್ನು ತೆಗೆದು ಹಾಕಿದರೆ ಪೂರ್ಣವೇ ಉಳಿಯುತ್ತದೆ" [ವಿಜಯ ಕರ್ನಾಟಕದ 'ಬಿಸಿಲು ಬೆಳದಿಂಗಳು' - ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ]

ಇಲ್ಲಿ ಈ ಶ್ಲೋಕ ಎಷ್ಟು ಪ್ರಸ್ತುತ ಎಂಬುದು ಅರ್ಥವಾಗಲಿಲ್ಲ. ದಯಮಾಡಿ ಅನಂತತೆಗೂ, ಪೂರ್ಣತೆಗೂ ಇರುವ ಸಂಬಂಧ ಮತ್ತು ಈ ಶ್ಲೋಕದ ಔಚಿತ್ಯ ತಿಳಿಸಿ.

ಇಷ್ಟಾಗಿಯೂ ಇದನ್ನು ಒಪ್ಪದಿರುವಿರಾದರೆ, ಈ ಮೂರು ಪ್ರಶ್ನೆಗಳಿಗೆ ಉತ್ತರವೀಯುವುದು ಅಗತ್ಯ -

1. ಆಕಾಶ ಸಾಂತವಾಗಿದ್ದರೆ, ಅದರ ಗಾತ್ರ (Volume) ಎಷ್ಟು, m3ಗಳಲ್ಲಿ? ಪ್ರಾಯೋಗಿಕವಾಗಿ ತಕ್ಷಣ ಸಾಬೀತುಪಡಿಸುವುದಕ್ಕಾಗದಿದ್ದರೂ ಕನಿಷ್ಟ ಒಂದು ಊಹನೆಯನ್ನಾದರೂ ಕೊಡಬೇಕಾಗುತ್ತದೆ theoritically!


ಅದ್ಭುತವಾದ ಪ್ರಶ್ನೆ. ಇಲ್ಲಿ ಎರಡು ಸಮಸ್ಯೆ ಇದೆ. ನಮಗೆ ಕಾಣುವ ಮತ್ತು ನಾವು ಗುರುತಿಸಬಲ್ಲ ವಸ್ತುಗಳನ್ನು ಕಲೆ ಹಾಕಿದರೆ ಅದು universe ನ ಶೇಕಡಾ 10 ಕೂಡಾ ಆಗದು..90 ಪ್ರತಿಶತ dark matter. ಇವುಗಳ ವಿಸ್ತೀರ್ಣ, ದ್ರವ್ಯರಾಶಿ ಗೊತ್ತಿಲ್ಲದೇ ನಾವು ಪೂರ್ಣ ಆಕಾಶದ volume ಆಗಲಿ, ಸಾಂದ್ರತೆಯಾಗಲಿ ಹೇಗೆ ಕಂಡುಹಿಡಿಯಲು ಸಾಧ್ಯ ? ಇದರ volume infinity ಎಂದು ಅಂದುಕೊಳ್ಳಬೇಕು. ಅದು ನಿಜವೂ ಕೂಡಾ .

2. ಆಕಾಶ ಸಾಂತವಾಗಿದ್ದರೆ ಅದರ ಗಡಿ ಹೇಗಿದೆ? ಅದರ ಗುಣ ಲಕ್ಷಣಗಳೇನು? ಅದು ಯಾವುದರಿಂದ ನಿರ್ಮಿತವಾಗಿದೆ? ಖಚಿತ ಉತ್ತರವಿಲ್ಲದಿದ್ದರೂ ಒಂದು predictionಅನ್ನು ಕೊಡಬೇಕಾಗುತ್ತದೆ.

3. ಆಕಾಶದ ಆಕಾರವೇನು? ಸಾಂತವಾದುದೆಲ್ಲಕ್ಕೂ ಒಂದು ಆಕಾರವಿರಬೇಕು, ದ್ರವ/ಅನಿಲದಂತೆ ತಾತ್ಕಾಲಿಕವಾದದ್ದಾದರೂ ಸರಿಯೇ.
4. ಆಕಾಶದ ಗಡಿಯನ್ನು ಸೀಳಿಕೊಂಡು ಹೋದರೆ ಏನು ಸಿಗುತ್ತದೆ? ಏಕೆಂದರೆ shape invariably implies a boundary. ಈ ಪ್ರಶ್ನೆಗೆ ತಾರ್ಕಿಕ ಆಧಾರವೂ ಇದೆ. ಯಾವುದೇ ಗಡಿಯು ನಿರ್ಧಾರವಾಗುವುದು ಎರಡು ವಸ್ತು/ಸಂಗತಿಗಳ ಮೇಲೆ. ಒಂದೇ ವಸ್ತು/ಸಂಗತಿಯಿದ್ದರೆ ಗಡಿ ಇರಲಿಕ್ಕೆ ಸಾಧ್ಯವಿಲ್ಲ. ನಾವು ವಸ್ತುವೊಂದರ ಗಡಿಯನ್ನು ಗುರುತಿಸಬಹುದು, ಯಾಕೆ, ಇಲ್ಲಿ ವಸ್ತು ಮತ್ತು ಅವಕಾಶ ಎಂಬ ಭಿನ್ನ ಸಂಗತಿಗಳು ಇವೆಯಾದ್ದರಿಂದ. ಒಂದು electron ಇದೆಯೆಂದು ನಾವು ಹೇಗೆ ಹೇಳುತ್ತೇವೆ? Electron ಒಂದು ವಸ್ತು, ಅದರ ಹೊರಗಡೆ ವಸ್ತುವಲ್ಲದ ಅವಕಾಶವಿದೆ, ಹಾಗಾಗಿ ಅದಕ್ಕೊಂದು ಆಕಾರ, ಗಾತ್ರ, ಗಡಿ ಇದೆಯೆಂದು ನಾವು ಹೇಳುತ್ತೇವೆ. ಸ್ವಲ್ಪ ಯೋಚಿಸಿ ನೋಡಿ, ಕನಿಷ್ಟ ಎರಡರ ವಿನಃ ಆಕಾರ, ಗಾತ್ರ, ಗಡಿ ಇರಲಾರದು. ಇದನ್ನೇ ವಿಶಿಷ್ಟಾದ್ವೈತದ ಭಾಷೆಯಲ್ಲಿ "ನಾಮ, ರೂಪ, ಭೇದ" ಎನ್ನುವುದು.


ನೀವು ಕೇಳಿರುವ ಈ ಮೇಲ್ಕಂಡ ಪ್ರಶ್ನೆಗಳನ್ನು ನೋಡಿದರೆ ನನಗೆ ನಿಮ್ಮ ಆಕಾಶದ ಪರಿಕಲ್ಪನೆಯ ಚಿತ್ರಣದ ಬಗ್ಗೆ ಸಲ್ಪ ಅನುಮಾನವಿದೆ. ನೀವು ಆಕಾಶವನ್ನು ಒಂದು ಘನವಾದ ಗೋಲವೆಂದು ಭಾವಿಸಿದ್ದೀರ ? ಚೆಂಡಿನ ತರಹ ಅಥವಾ ಬೆಣ್ಣೆ ಮುದ್ದೆಯ ಥರ ? ಈ ಕಲ್ಪನೆ ನಮ್ಮ calculations ಗೆ ಸಹಾಯವಾಗುತ್ತದೆ ಹೊರತು ಅದು ಸತ್ಯವಲ್ಲ. all these are approximations which enable us to calculate and find out the structure of the universe. ಇವೆಲ್ಲ ನಮ್ಮನ್ನು ಸತ್ಯದ ಹತ್ತಿರಕ್ಕೆ ಕರೆದುಕೊಂಡು ಹೋಗುತ್ತವೆ ಅಷ್ಟೆ. ಸತ್ಯದ ಅರಿವು ನಮಗಿನ್ನೂ ಆಗಬೇಕಿದೆ. ಈ ಅಂತ್ಯವಿರುವ ವಸ್ತುವಿಗೆ ಗಡಿ ಇವೇ ಮುಂತಾದವು ಇರಬೇಕೆಂದಿದ್ದರೆ ಅದು ಮೂರು ಆಯಾಮಗಳ ಪರಿಧಿಯಲ್ಲಿ ಗೋಚರಿಸಬಲ್ಲವು. ಆದರೆ ಆಕಾಶಕ್ಕೆ ಯೆಷ್ಟು ಆಯಾಮವಿದೆ ಎಂದು ನಾವಿನ್ನೂ ಕಂಡುಹಿಡಿಯಬೇಕಿದೆ.ಸದ್ಯಕ್ಕೆ ನಮಗೆ ತಿಳಿದಿರುವುದು ನಾಲ್ಕು ಆಯಾಮಗಳು. dimensions ಸಿಕ್ಕಿ, ನಾವದರ coordinates [with respect to earth] ಕಂಡು ಹಿಡಿದು, ಅದು ಯಾವ ಆಕಾರವನ್ನು ಹೋಲುತ್ತದೆ ಎಂದು ಕಂಡುಹಿಡಿಯಲು ನಮಗೆ ಆಕಾಶದ ಮೂಲ ಸ್ವರೂಪ ಗೊತ್ತಿಲ್ಲ ! ಆಕಾಶದ shape ? ಒಳ್ಳೆ ಪ್ರಶ್ನೆ ! ಡಾರ್ಕ್ ಮಾಟರ್ ನಮಗೆ ಗೋಚರಿಸಿ, ಅದು ಎಲ್ಲೆಲ್ಲಿ ಹೇಗೆ ಹೇಗೆ ಚೆಲ್ಲಾಪಿಲ್ಲಿಯಾಗಿದೆ ಎಂದು ಗೊತ್ತಾದರೆ ಆಕಾಶಕ್ಕೆ ಯಾವ ಆಕಾರವಿದೆ ಎಂದು ತಿಳಿದುಕೊಳ್ಳಬಹುದೇನೋ ಪ್ರಾಯಶಃ ! ಅದು ಆಗದ ಮಾತು ಬಿಡಿ !

ನೀವು ಅಂತವನ್ನು "edge" ಎಂದು ದಯಮಾಡಿ ಭಾವಿಸದಿರಿ ! ನಾನು ಮಾತಾಡುತ್ತಿರುವುದು " end" ಬಗ್ಗೆ!

ಎಲೆಕ್ಟ್ರಾನಿನ ಉದಾಹರಣೆಯಲ್ಲಿ ನೀವು system ಮತ್ತು surrounding ಅನ್ನು ಅತೀ ಕ್ಲಿಷ್ಟಪದಗಳಲ್ಲಿ ಹೇಳಿದ್ದೀರಿ. ನೀವು ಆಕಾಶವನ್ನು system ಎಂಡು ಭಾವಿಸುತ್ತೀರಾ ? ಸರಿ, it expands into nothingness. ನೀವು "ಗಡಿ " (?) ದಾಟಿಹೋದರೆ ನಿಮಗೇನೂ ಸಿಗದು ! ಆಕಾಶಕ್ಕೆ ಅಂತ್ಯವಿದೆ...ಅಂತದ ಸ್ವರೂಪ (ಅದು ಇದ್ದರೆ ) ನಾವು ತಿಳಿಯಬೇಕಿದೆ.

@ Sunaath [There is space only when there are two objects. There is no space when there is no object]

ಅದ್ವೈತದ ಪ್ರಕಾರ ಹೌದು. ಆದರೆ ಈ ವಾಕ್ಯವನ್ನು ಸ್ವಲ್ಪ ಪರಿಷ್ಕರಿಸಬೇಕಾಗುತ್ತದೆ. ಕನಿಷ್ಟ ನಾಲ್ಕು non-coplanar ಬಿಂದುಗಳಿದ್ದರೂ ಸಾಕು ಈ ವಿಶ್ವದಲ್ಲಿ, ನೀವು ಅವಕಾಶವನ್ನು define ಮಾಡಬಹುದು. ಕೇವಲ (absolute) ಸ್ಥಳವನ್ನು (space), ವಸ್ತುವಿನ ಹೊರತಾಗಿ define ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತದೆ ಅದ್ವೈತ. ಹೇಗಿದು? ವಿಶ್ವದಲ್ಲಿ ಯಕಶ್ಚಿತ್ ಒಂದೇ ಒಂದು ವಸ್ತುವಿದ್ದರೂ ಅದರ ಮೇಲೆ ನಾಲ್ಕು non-coplanar ಬಿಂದುಗಳನ್ನು ಗುರುತಿಸಲು ಸಾಧ್ಯವಿದೆ. ಅದರ ಆಧಾರದ ಮೇಲೆ, ಒಂದು ಏಕಮಾನವನ್ನು ನಿರ್ಧರಿಸಿ ಯಾವ ದಿಕ್ಕಿಗೆ ಬೇಕಾದರೂ ಅಳೆಯಬಹುದು, ವಸ್ತುವಿನ ಒಳಕ್ಕಾಗಲೀ ಹೊರಕ್ಕಾಗಲೀ. ವಸ್ತುವಿಗೆ ಹೋಲಿಸಿದಂತೆ ಮಾತ್ರ ಆಕಾಶಕ್ಕೆ ಅಸ್ತಿತ್ವ. ಆಧುನಿಕ ವಿಜ್ಞಾನ ಇದನ್ನು ಒಪ್ಪುವುದೋ ಇಲ್ಲವೋ ಗೊತ್ತಿಲ್ಲ. ಆದರೂ ಮನಸ್ಸಿನಲ್ಲಿ ಏನೋ ಒಂದು ಅನುಮಾನ ಅಲ್ವೇ? ನಾವು ವಸ್ತುವಿನ ಹೊರತಾದ ಆಕಾಶದ ಕಲ್ಪನೆ ಮಾಡಿಕೊಳ್ಳುವಾಗ, ವೀಕ್ಷಕರಾಗಿ ನಾವು ಇದ್ದೇ ಇರುತ್ತೇವೆ. ಹಾಗಾಗಿ ಆಕಾಶದ ಕಲ್ಪನೆ ಸಾಧುವಾಗುತ್ತದೆ. ವಸ್ತು ಮತ್ತು ಆಕಾಶ ಇವೆರಡರಲ್ಲಿ ಯಾವುದು ಮೂಲ ಎಂದು ಹೇಳಲಾಗದು. ಎರಡೂ ಪರಸ್ಪರ ಸಂಬಂಧಿಸಿದಂತೆ ಮಾತ್ರ ಇವೆ, ಒಂದಿಲ್ಲದೆ ಮತ್ತೊಂದು ಇರಲಾರದು ಎಂದು ಅಭಿಪ್ರಾಯಪಡುತ್ತದೆ ಅದ್ವೈತ.


ಸುನಾಥರಿಗೆ ನೀವು ನೀಡಿರುವ ಈ ಮೇಲಿನ ಉತ್ತರದ source ಕೊಡಿ.

@ [ಆಕಾಶ ಸಾಂತವಾಗಲು ಈ ಪೂರ್ಣವಿಶ್ವದ ಸಾಂದ್ರತೆ ಮತ್ತು ಎಂಟ್ರೋಪಿ ಎಂಬ ವಿಚಾರಗಳಿಂದ]
Hyperphysicsನ ಕೊಂಡಿಯ ಪ್ರಕಾರ ಪ್ರಸ್ತುತ ವಿಶ್ವ Critical densityಗಿಂತ ಸ್ವಲ್ಪವೇ ಕಡಿಮೆ ಸಾಂದ್ರತೆಯನ್ನು ಹೊಂದಿರುವ ಕಾರಣ ಅದು ನಿಧಾನಗತಿಯಲ್ಲಿ ವ್ಯಾಕೋಚನಗೊಳ್ಳುತ್ತಿದೆ. ಮತ್ತದು ನಿಲ್ಲುವ ಸಾಧ್ಯತೆ ಇಲ್ಲ ಏಕೆಂದರೆ ವ್ಯಾಕೋಚನವಾದಂತೆಲ್ಲ ಸಾಂದ್ರತೆ ಕಡಿಮೆಯಾಗುತ್ತದೆಯೇ ಹೊರತು ಗುರುತ್ವ ಮಾತ್ರ ಒಂದೇ ಸಮನಾಗಿ ಇರುತ್ತದೆ. ಮತ್ತೆ, ನಾವು ಓದಿರುವ thermodynamic ವಿವರಣೆಯ entropyಗೆ ಬಂದರೆ ಪ್ರಾರಂಭದಲ್ಲಿ ವಿಶ್ವ ಅತಿ ಕಡಿಮೆ entropy stateನಲ್ಲಿ ಇತ್ತು. ಆದರೆ "low-entropy states are short-lived" ಹಾಗಾಗಿ ವಿಶ್ವ ತನ್ನ entropyಯನ್ನು ಹೆಚ್ಚಿಸಿಕೊಳ್ಳುವತ್ತ ಸಾಗುತ್ತಿದೆ. ಅದರ ಪರಿಣಾಮವೇ Big bang ಎಂದು ಓದಿದ ನೆನಪು. ಇದನ್ನೆಲ್ಲ ನೋಡಿದರೆ ವಿಜ್ಞಾನಿಗಳು ಅದೇನು Universe ಎಂದು ಕರೆಯುತ್ತಿದ್ದಾರೋ ಅದು ಕೇವಲ ವಸ್ತುಜಗತ್ತು (matter) ಮತ್ತು ಅದಕ್ಕೆ ಮಾತ್ರ ಹೊಂದಿಕೊಂಡತಿರುವ ಸೀಮಿತ ಸ್ಥಳಾವಕಾಶದ ಮಾನಬಿಂದುಗಳು (coordinates) ಮಾತ್ರ.


ಹೌದು. ಕಾಣದ ವಸ್ತುಗಳ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದೆ.

ಇದಲ್ಲದೆ ನೀವು ಕೊಟ್ಟ ಎರಡು linkಗಳನ್ನು ಓದುವಾಗ ಅವು ಒಂದಷ್ಟು ಅನುಮಾನಗಳನ್ನು ಹುಟ್ಟು ಹಾಕಿವೆ -
"Nothing is absolute in this universe except the velocity of light" ಎನ್ನುವುದೊಂದು ಸಾಪೇಕ್ಷತಾ ಸಿದ್ಧಾಂತದ ಮೂಲ ಪರಿಕಲ್ಪನೆ.


ಅದು absolute alla, constant. relativity yalli "absolute" eMdu Enannu kareyuvudilla !

ನನಗೆ ತಿಳಿದಂತೆ, ಈ ವಿಷಯವನ್ನು ಸಾಧಿಸುವುದಕ್ಕಾಗಿ ಅವಕಾಶ ಮತ್ತು ಕಾಲವನ್ನು ಬೇಕಾಬಿಟ್ಟಿ ಹಿಗ್ಗಿಸುವುದು ಕುಗ್ಗಿಸುವುದು ಮಾಡುತ್ತಾರೆ.

ಅದು ಬೇಕಾಬಿಟ್ಟಿ ಅಲ್ಲ, ಪ್ರಯೋಗಸಿದ್ಢ ಸತ್ಯ. length contarction and time dilation ಎಂಬ ಎರಡು ವಿದ್ಯಮಾನಗಳು. ಅದನ್ನು ವಿಜ್ಞಾನಿಗಳು ಮಾಡೊಲ್ಲ, ಅದು ಪ್ರಾಕೃತಿಕವಾಗಿ ಸಂಭವಿಸುತ್ತದೆ.ಆದ್ದರಿಂದಲೇ ಸಾಪೇಕ್ಷ ಸಿದ್ಢಾಂತ ಅಸ್ತಿತ್ವದಲ್ಲಿದೆ. ಯಾಕಂದರೆ ಈ ಸಿದ್ಧಾಂತವನ್ನು ಪುಷ್ಟೀಕರಿಸುವುದು ಇವೆರಡೂ ನಿಯಮಗಳು.

ಒಮ್ಮೆ planetariumಗೆ ಹೋಗಿದ್ದಾಗ, ಐನ್ಸ್ಟೈನ್ ಸಿದ್ಧಾಂತಗಳ ಪರಿಚಯ ಮಾಡಿಕೊಟ್ಟರು. ಬೆಳಕಿನ ವೇಗ ನಿರಪೇಕ್ಷವಾದುದು ಎಂದು ಸಾಬೀತುಪಡಿಸುವ ಪ್ರಯೋಗವೊಂದನ್ನು ಉಲ್ಲೇಖಿಸಿದರು, ನನಗೆ ಅದರ ಪ್ರಯೋಗಕರ್ತರ ಹೆಸರು ನೆನಪಿಲ್ಲ. ಪರಸ್ಪರ ಪ್ರದಕ್ಷಿಸುವ ಅವಳಿ ನಕ್ಷತ್ರಗಳನ್ನು (twin stars) ನಾವು ಬಲ್ಲೆವು. ಭೂಮಿಯಿಂದ ಗಮನಿಸಿದಾಗ, ಒಂದು ನಮ್ಮಿಂದ ದೂರ ಸರಿಯುತ್ತಿರುವಂತೆ ಮತ್ತೊಂದು ಹತ್ತಿರ ಬರುತ್ತಿರುವಂತಿರುವ ಎರಡು ಅವಳಿ ನಕ್ಷತ್ರಗಳನ್ನು (twin stars) ಗುರುತಿಸಿ, ಅವುಗಳಿಂದ ಬರುತ್ತಿರುವ ಬೆಳಕನ್ನು ಪ್ರತ್ಯೇಕಿಸಿ ಅವುಗಳ ವೇಗ ಅಳೆದಾಗ ಬೆಳಕಿನ ವೇಗ ಎರಡೂ ಸನ್ನಿವೇಶಗಳಲ್ಲಿ ಒಂದೇ ಇರುವುದು ಸಾಬೀತಾಯಿತು.

ಹುಂ, ಇನ್ನು big bangಗೆ ಬಂದರೆ, ಡಾಪ್ಲರ್ ಪರಿಣಾಮದಿಂದುಟಾಗುವ ರಕ್ತವರ್ಣಪಲ್ಲಟವೇ ಆ ಮಹಾಸ್ಫೋಟಕ್ಕೆ ಸಾಕ್ಷಿ. "v = Hor" ಸೂತ್ರದ ಪ್ರಕಾರ ವಸ್ತುಗಳ ಚಿಮ್ಮುವಿಕೆಯ ತತ್ಕಾಲೀನ ವೇಗವು (instantaneous velocity) ಅವು ನಮ್ಮಿಂದ ಇರುವ ದೂರದ (displacement) ನೇರ ಅನುಪಾತದಲ್ಲಿದೆ (directly proportional). ವಸ್ತು ನಮ್ಮಿಂದ ದೂರ ಸರಿದಂತೆಲ್ಲ ಅದರ ವೇಗ ವರ್ಧಿಸಬೇಕು. ನಕ್ಷತ್ರಗಳು ವೇಗೋತ್ಕರ್ಷಗೊಳ್ಳುತ್ತಿರುವುದು (accelerate) ನಿರ್ವಿವಾದ, ಇಲ್ಲವಾದರೆ, ಸ್ಥಿರ ವೇಗದಲ್ಲಿ (constant velocity) ನಕ್ಷತ್ರಗಳು ಚಲಿಸುತ್ತಿದ್ದರೆ reference spectrumನಿಂದ ಸ್ವಲ್ಪ ಭಿನ್ನತೆಯನ್ನು ತಾಳಿದ ಯಾವುದೋ ಒಂದು ನಿಶ್ಚಿತ ರೋಹಿತ ಮಾದರಿಯೇ ಯಾವಾಗಲೂ ಇರುತ್ತದೆ, ಇಂಥಾ ಸ್ಥಿತಿಯಲ್ಲಿ ರಕ್ತವರ್ಣಪಲ್ಲಟವು ಅಸಾಧ್ಯ.
ಇಲ್ಲಿ ಪ್ರಶ್ನೆಯಿಷ್ಟೆ, ಮೇಲಿನೆರಡು ಪ್ಯಾರಾಗಳು ಪರಸ್ಪರ ವಿರೋಧಾಭಾಸಕ್ಕೆ ಎಡೆ ಮಾಡಿಕೊಡುತ್ತಿವೆ. ಬೆಳಕಿನ ವೇಗ ನಿರಪೇಕ್ಷವೆಂದ ಮೇಲೆ Doppler effect ಹೇಗೆ ಸಾಧ್ಯ? Doppler effect ಸಾಧ್ಯವಿಲ್ಲವೆಂದ ಮೇಲೆ, ರಕ್ತವರ್ಣ ಪಲ್ಲಟವೂ ಸಾಧ್ಯವಿಲ್ಲ. ದಯವಿಟ್ಟು ಮತ್ಯಾವುದೋ ಲಿಂಕು ಕೊಟ್ಟು ಪ್ರಶ್ನೆ ತೇಲಿಸಬೇಡಿ, ಉತ್ತರಿಸಿ.


ನೀವು Doppler shift ಅನ್ನು ಅರ್ಥಮಾಡಿಕೊಳ್ಳುವಲ್ಲಿ ಸಲ್ಪ ಎಡವಿದ್ದೀರಿ. ಇಲ್ಲಿ ಏರುವುದು, ಇಳಿಯುವುದು ಬೆಳಕಿನ ವೇಗವಲ್ಲ, ವಸ್ತುವಿನ ಚಲನ ವೇಗ . ಬೆಳಕಿನ ವೇಗ ಒಂದೇ.

ವಸ್ತುವೊಂದು ನಮ್ಮ ಹತ್ತಿರ ಬರುತ್ತಿರಬೇಕಾದರೆ ಆ ವಸ್ತುವಿನ ಬೆಳಕಿನ ತರಂಗಗಳ ಅಲೆಯುದ್ದ (wavelength) ಕಡಿಮೆಯಾಗುತ್ತದೆ. ಆದ್ದರಿಂದ ಅದು ನೀಲಿ ( ಕಡಿಮೆ ಅಲೆಯುದ್ದ ಬಣ್ಣ )ಬಣ್ನದ ಕಡೆಗೆ ವಾಲುತ್ತದೆ. ವಸ್ತುವು ದೂರ ಹೋಗುತ್ತಿರಬೇಕಾದರೆ ಅದು accelerate ಆಗತ್ತೆ, ಒಪ್ಪಿದೆ. ಆಗ ಅವುಗಳಿಂದ ಹೊರಬರುವ ಅಲೆಯುದ್ದಗಳ ಅಂತರ ಜಾಸ್ತಿಯಿರುತ್ತದೆ. ಆದ್ದರಿಂದ ಅದು ರಕ್ತ ವರ್ಣದ ಕಡ್ಗೆ ವಾಲುತ್ತವೆ. ರೋಹಿತಗಳ ಮಾದರಿ ಒಂದೆ, ಆದರೆ ಅವುಗಳ peak lines shift ಆಗಿರತ್ತೆ red end ಗೆ. ಇದೇ red shift.

ನಿಮ್ಮ ಪ್ರಶ್ನೆಗಳಿಗೆ ತಕ್ಕ ಸಮಾಧಾನ ಕೊಟ್ಟಿದ್ದೇನೋ ಇಲ್ಲವೋ ಗೊತ್ತಿಲ್ಲ, ಆದರೆ ನಿಮ್ಮ ಕೆಲವು ಪರಿಕಲ್ಪನೆಗಳನ್ನು ನಿಮ್ಮ ಮುಂದಿನ ಕಮೆಂಟಿನಲ್ಲಿ ಸ್ಪಷ್ಟವಾಗಿ ತಿಳಿಸಿ. ಆಗ ನಿಮ್ಮ ಪ್ರಶ್ನೆಗಳನ್ನು ಇನ್ನು ಚೆನ್ನಾಗಿ ಅರ್ಥೈಸಿ ನಿಮಗೆ ಉತ್ತರ ನೀಡಲು ಪ್ರಯತ್ನಿಸುತ್ತೇನೆ.

Ramesh BV (ಉನ್ಮುಖಿ) said...

1.ನೀವು ಕೇಳಿರುವ ಈ ಮೇಲ್ಕಂಡ ಪ್ರಶ್ನೆಗಳನ್ನು ನೋಡಿದರೆ ನನಗೆ ನಿಮ್ಮ ಆಕಾಶದ ಪರಿಕಲ್ಪನೆಯ ಚಿತ್ರಣದ ಬಗ್ಗೆ ಸಲ್ಪ ಅನುಮಾನವಿದೆ. ನೀವು ಆಕಾಶವನ್ನು ಒಂದು ಘನವಾದ ಗೋಲವೆಂದು ಭಾವಿಸಿದ್ದೀರ ? ಚೆಂಡಿನ ತರಹ ಅಥವಾ ಬೆಣ್ಣೆ ಮುದ್ದೆಯ ಥರ ? ಈ ಕಲ್ಪನೆ ನಮ್ಮ calculations ಗೆ ಸಹಾಯವಾಗುತ್ತದೆ ಹೊರತು ಅದು ಸತ್ಯವಲ್ಲ. all these are approximations which enable us to calculate and find out the structure of the universe. ಇವೆಲ್ಲ ನಮ್ಮನ್ನು ಸತ್ಯದ ಹತ್ತಿರಕ್ಕೆ ಕರೆದುಕೊಂಡು ಹೋಗುತ್ತವೆ ಅಷ್ಟೆ. ಸತ್ಯದ ಅರಿವು ನಮಗಿನ್ನೂ ಆಗಬೇಕಿದೆ. ಈ ಅಂತ್ಯವಿರುವ ವಸ್ತುವಿಗೆ ಗಡಿ ಇವೇ ಮುಂತಾದವು ಇರಬೇಕೆಂದಿದ್ದರೆ ಅದು ಮೂರು ಆಯಾಮಗಳ ಪರಿಧಿಯಲ್ಲಿ ಗೋಚರಿಸಬಲ್ಲವು. ಆದರೆ ಆಕಾಶಕ್ಕೆ ಯೆಷ್ಟು ಆಯಾಮವಿದೆ ಎಂದು ನಾವಿನ್ನೂ ಕಂಡುಹಿಡಿಯಬೇಕಿದೆ

ಆಕಾಶ ಅನಂತ ಅಂದ್ರೆ ಘನಗೋಲ,ಚೆಂಡು ಅಥವಾ ಬೆಣ್ಣೆ ಮುದ್ದೇನೆ?! !

2. ನೀವು ಅಂತವನ್ನು "edge" ಎಂದು ದಯಮಾಡಿ ಭಾವಿಸದಿರಿ ! ನಾನು ಮಾತಾಡುತ್ತಿರುವುದು " end" ಬಗ್ಗೆ!

ಎಲೆಕ್ಟ್ರಾನಿನ ಉದಾಹರಣೆಯಲ್ಲಿ ನೀವು system ಮತ್ತು surrounding ಅನ್ನು ಅತೀ ಕ್ಲಿಷ್ಟಪದಗಳಲ್ಲಿ ಹೇಳಿದ್ದೀರಿ. ನೀವು ಆಕಾಶವನ್ನು system ಎಂಡು ಭಾವಿಸುತ್ತೀರಾ ? ಸರಿ, it expands into nothingness. ನೀವು "ಗಡಿ " (?) ದಾಟಿಹೋದರೆ ನಿಮಗೇನೂ ಸಿಗದು ! ಆಕಾಶಕ್ಕೆ ಅಂತ್ಯವಿದೆ...ಅಂತದ ಸ್ವರೂಪ (ಅದು ಇದ್ದರೆ ) ನಾವು ತಿಳಿಯಬೇಕಿದೆ.

ಈ ಮೊದಲು ಚರ್ಚಿಸಿದ ರಬ್ಬರ್ ಎxಪಾನ್ಶನ್ analogy ಎಡ್ಜ್ ಇದೆ ಅನ್ನೋ ಹಾಗೆ ಹೇಳುತ್ಯೇ?
“It expands into nothingness..” How do you see this nothingness?
You say, ಆಕಾಶಕ್ಕೆ ಅಂತ್ಯವಿದೆ.. Does it mean, ಆಕಾಶ is different from that nothingness/void..
You say ಅಂತ್ಯವಿದೆ and also say (ಅದು ಇದ್ದರೆ ) ನಾವು ತಿಳಿಯಬೇಕಿದೆ… It shows there is contradiction in your mind..
How do you see “END”?

3. ಸುನಾಥರಿಗೆ ನೀವು ನೀಡಿರುವ ಈ ಮೇಲಿನ ಉತ್ತರದ source ಕೊಡಿ.
Jnaanayoga by Swami Vivekananda



4. How would you define and differentiate, absolute and constant?


5. Before going further, let us have some common understandings on some physical terms...

a. How do you see “Entropy”?
b. As regards the Doppler effect, we see it thus,
It is an apparent physical observation. It occurs when observer goes away or towards the source of wave (Mechanical or electromagnetic)...
When observer is going away, he will be catching a particular pulse delayed in time (Taking his static position as normal one)... so the wavelength becomes longer (than the wavelength he would see when he is static).
[Sinusoidal wave representation is just graphical representation for analysis; there should be no direct analogy towards the graphical symbol when it is said wave here].
And when observer is going towards the source of wave, the opposite is observed... I.e. he catches a particular pulse in ahead the normal time.. and wavelength will become shorter.
Please let me know if you see Doppler Effect different from this.
c. When we say shift in Doppler effect, it is just said wrt the graphical frequency/wavelength band on paper.. i.e., the wavelength of particular source was here on the band... since change in wavelength occurred, we point that on graphical band and say it is moved to the left or right wrt the previous observation... (Blue and Red are the references to say direction of shift on the electromagnetic wave band representation). If you have anything extra to say here, please bless me.

Ramesh BV (ಉನ್ಮುಖಿ) said...

ಸುನಾಥರೇ,
ಸರಿಯಾಗಿಯೇ ಅರ್ಥ ಮಾಡಿಕೊಂಡಿದ್ದೀರಿ ಅದ್ವೈತವನ್ನ. ಕಾಲ ಹಾಗು ಕಾರ್ಯಕಾರಣಗಳ, ದೇಶ ಹಾಗು ವಸ್ತುಗಳ ನಡುವೆ ಅನ್ಯೋನ್ಯ ಆಶ್ರಯವಿದೆ. ಒಂದಿಲ್ಲದೆ ಮತ್ತೊಂದು ಇರಲಾರದು. ವಿವೇಕಾನಂದರ ಜ್ಞಾನಯೋಗ ಈ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶಿ ಆಗಬಲ್ಲುದು. ಅದರಲ್ಲಿ ಅದ್ವೈತದ ಸೂಕ್ಷ್ಮಗಳನ್ನು ಬಹಳ ಸುಂದರವಾಗಿ ನಿರೂಪಿಸಿದ್ದಾರೆ.ಆದರೆ Einstein ನ ಸಿದ್ದಾಂತಗಳು ಅದ್ವೈತವನ್ನು ಸಮರ್ಥಿಸಿಕೊಂಡಂತೆ ಕಂಡರೂ ಅದ್ವೈತಕ್ಕೆ ಹೊರತಾಗುತ್ತವೆ. ಅಲ್ಲಿ ಈ ಅಸ್ತಿತ್ವವನ್ನ ಒಂದೇ ಎಂದು ಸಾಬಿತುಪಡಿಸುವ ಯಾವುದೇ ಪ್ರಯತ್ನ ಕಾಣುತ್ತಿಲ್ಲ. ಸಮಕಾಲೀನ ಪ್ರಯೋಗಗಳ ಫಲಿತಾಂಶಗಳನ್ನು ವಿವರಿಸುವ(ಅವು ಪ್ರಾಯೋಗಿಕವಾಗಿ ಸಿದ್ದವಾಗಿರಲೂ ಬಹುದು) ಪ್ರಯತ್ನ ಅಷ್ಟೆ. ಅದ್ವೈತದ ಪ್ರಕಾರ ಮನಸ್ಸಿನ ಯಾವ ವಿಕ್ಷೇಪಗಳಿಂದಲೂ (ವಿಜ್ಞಾನವೂ ಸೇರಿದಂತೆ) ಕೂಡ ಸತ್ಯವನ್ನು ತಲುಪಲಾರೆವು. ವಿಜ್ಞಾನ ಒಂದು ರೀತಿಯ ವಿಷಯೀಕರಣ ಆದ್ದರಿಂದ ಅದು ಸತ್ಯವನ್ನು ತಲುಪಲು ಸಾಧ್ಯವೇ ಇಲ್ಲ ಎನ್ನುತ್ತದೆ ಅದ್ವೈತ.


ಲಕ್ಷ್ಮಿಯವರೆ,
ಸಂತೆಗೋಗೋ ಹೊತ್ತಿಗೆ ಮೂರು ಮೊಳ ನೇಯ್ಕೊಂಡು ಹೋದ್ರು ಅನ್ನೋ ಹಾಗೆ ಅವಸವಸರವಾಗಿ ಪ್ರತಿಕ್ರಿಯಿಸಿದ್ದೀರಿ. ಈ ಇಡೀ ಸಂವಾದವನ್ನ ಪವನಜ ಸರ್ ಗೆ ತೋರಿಸಿ ಮತ್ತೊಮ್ಮೆ ಹೊಸದಾಗಿ ಪ್ರತಿಕ್ರಿಯಿಸಿ.

ಪ್ರತಿಕ್ರಿಯಿಸುವಾಗ ಗಮನವಿರಲಿ, ನನ್ನ ಇಡೀ ಪ್ರತಿಕ್ರಿಯೆಗಳ ಸರಣಿಯನ್ನ ಒಟ್ಟಾಗಿ ಒಮ್ಮೆ ಓದಿ. ಉತ್ತರಗಳು ಇಡೀ ಪ್ರಶ್ನೆಗೆ ಬದ್ಧವಾಗಿರಲಿ. ಯಾವುದೋ ಒಂದಷ್ಟು ವಾಕ್ಯಗಳನ್ನು ಅವುಗಳ ಸಂದರ್ಭದಿಂದ ಪ್ರತ್ಯೇಕಿಸಿ ಉತ್ತರಿಸದಿರಿ.

-
ಶಶಾಂಕ

Srikanth - ಶ್ರೀಕಾಂತ said...

ವಿಜ್ಞಾನದಲ್ಲಿ ಅಜ್ಞಾನಿಯಾದ ನಾನು ಈ ಬ್ಲಾಗಿನಿಂದ ಏನಾದರೂ ಜ್ಞಾನ ಪಡೆದುಕೊಳ್ಳಬಹುದೇನೋ ಎಂದು ನೋಡಿದೆ. ಮೊದಲಿನಿಂದ ಸುಮಾರು ಹತ್ತು ಕಮೆಂಟುಗಳಲ್ಲಿ ಅರ್ಥಪೂರ್ಣವಾದ ಚರ್ಚೆಯೇ ನಡೆದಿತ್ತು. ನಂತರದ ಕಮೆಂಟುಗಳು ಬಹಳ ವೈಜ್ಞಾನಿಕ ಪದಗಳನ್ನು ಉಪಯೋಗಿಸಿ ವಾದ ನಡೆಸಿರುವುದರಿಂದ ಅರ್ಥವಾಗಲಿಲ್ಲ.

ವಿಜ್ಞಾನದ ವಿಷಯದಲ್ಲಿ ನಾನು ಹೆಚ್ಚು ಹೇಳಲಾರೆ. ಆದರೆ ಚರ್ಚೆಯ ಮಧ್ಯೆ ವಿಶಿಷ್ಟಾದ್ವೈತ ಸಿದ್ಧಾಂತ ಬಂತು, ಅದ್ವೈತ ಸಿದ್ಧಾಂತ ಬಂತು, ದಕ್ಷಿಣಾಮೂರ್ತಿ ಸ್ತೋತ್ರ ಬಂತು, "ಪೂರ್ಣಮದಃ ಪೂರ್ಣಮಿದಂ" ಎಂಬ ವೇದ ಮಂತ್ರವೂ ಬಂತು! ತಮ್ಮ ನಿಲುವನ್ನು ಅರ್ಥ ಮಾಡಿಸಲು ಒಬ್ಬರೇ ಒಂದೇ ಕಮೆಂಟಿನಲ್ಲಿ ವೈರುಧ್ಯಗಳಿಂದ ಕೂಡಿರುವ ಎರಡು ಸಿದ್ಧಾಂತಗಳನ್ನು (ವಿಶಿಷ್ಟಾದ್ವೈತ, ಅದ್ವೈತ) ಹೇಗೆ ಉಪಯೋಗಿಸಲು ಸಾಧ್ಯ? ಅದಕ್ಕಿಂತ ಮುಖ್ಯವಾಗಿ ವಿಜ್ಞಾನದ ಮಧ್ಯದಲ್ಲಿ ತತ್ವಜ್ಞಾನವನ್ನು ತರುವುದು ಅವಶ್ಯಕವೇ?

ಹೋಗಲಿ, ತತ್ವಜ್ಞಾನವನ್ನು ಸರಿಯಾಗಿಯಾದರೂ ಚರ್ಚೆಗೆ ಬಳಸಿದ್ದೀರೇ? ಅದೂ ಇಲ್ಲ!

---------------------------------
ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ|
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವ ಅವಶಿಷ್ಯತೇ||
"ಅದು ಪೂರ್ಣ, ಇದು ಪೂರ್ಣ, ಪೂರ್ಣದಿಂದ ಪೂರ್ಣ ಉಂಟಾಗುತ್ತದೆ, ಪೂರ್ಣದಿಂದ ಪೂರ್ಣವನ್ನು ತೆಗೆದು ಹಾಕಿದರೆ ಪೂರ್ಣವೇ ಉಳಿಯುತ್ತದೆ" [ವಿಜಯ ಕರ್ನಾಟಕದ 'ಬಿಸಿಲು ಬೆಳದಿಂಗಳು' - ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ]
---------------------------------


ಇಲ್ಲಿ "ಅದು ಪೂರ್ಣ, ಇದು ಪೂರ್ಣ..." ಎಂದೆಲ್ಲ ಮಾತ್ರ ಹೇಳುತ್ತಾರೇ ಹೊರತು ಯಾವುದು ಪೂರ್ಣ ಎಂದು ಸ್ಪಷ್ಟಾವಾಗಿ ಹೇಳೇ ಇಲ್ಲ. ಆಕಾಶವೇ ಯಾಕೆ? ನಾನು ಮನಸ್ಸಿಗೆ ಬಂದದ್ದನ್ನೆಲ್ಲಾ 'ಅದು' ಮತ್ತು 'ಇದು' ಎಂದುಕೊಳ್ಳಬಹುದಲ್ಲ! ಇಷ್ಟು ಅಸ್ಪಷ್ಟತೆ ಇರುವಾಗ ಅದನ್ನು ಬಳಸಿಕೊಂಡಿದ್ದಾದರೂ ಯಾಕೆ? ಮುಂದೆ,

---------------------------------
"ಮಾಯಾಕಲ್ಪಿತ ದೇಶ ಕಾಲ ಕಲನಾ.."
ಅಂದರೆ, space and time are virtual.
ದೇಶ(=space) ಮತ್ತು ಕಾಲ(=Time) ಇವುಗಳಿಗೆ ಸ್ವತಂತ್ರ
ಅಸ್ತಿತ್ವವಿಲ್ಲ. ಇವು ಕೇವಲ ಭ್ರಮೆ.
---------------------------------

ಮತ್ತೆ ಇದನ್ನು ಸರಿ ಎನ್ನುವ ಕೊನೆಯ ಕಮೆಂಟಿನಲ್ಲಿ

---------------------------------
ಸುನಾಥರೇ,
ಸರಿಯಾಗಿಯೇ ಅರ್ಥ ಮಾಡಿಕೊಂಡಿದ್ದೀರಿ ಅದ್ವೈತವನ್ನ. ಕಾಲ ಹಾಗು ಕಾರ್ಯಕಾರಣಗಳ, ದೇಶ ಹಾಗು ವಸ್ತುಗಳ ನಡುವೆ ಅನ್ಯೋನ್ಯ ಆಶ್ರಯವಿದೆ. ಒಂದಿಲ್ಲದೆ ಮತ್ತೊಂದು ಇರಲಾರದು.
---------------------------------


ಎಲ್ಲಿ ದಕ್ಷಿಣಾಮೂರ್ತಿ, ಎಲ್ಲಿ ಆಕಾಶ! ಆದರೂ ಇದನ್ನು ಚರ್ಚಿಸಿರುವುದರಿಂದ ನನಗನ್ನಿಸಿದ್ದನ್ನು ಹೇಳುತ್ತೇನೆ. ಇಲ್ಲದ್ದು ಇದೆ ಎನ್ನಿಸಿದರೆ ಅದನ್ನು "ಭ್ರಮೆ" ಎಂದು ಕರೆಯುತ್ತಾರೆ. ಸ್ವತಂತ್ರ ಅಸ್ತಿತ್ವ ಇಲ್ಲ ಎಂದ ಮಾತ್ರಕ್ಕೆ ಭ್ರಮೆ ಎಂದು ಹೇಗೆ ಹೇಳುತ್ತೀರೋ ಗೊತ್ತಿಲ್ಲ. ಅಸ್ವತಂತ್ರವಾಗಿಯಾದರೂ ಅಸ್ತಿತ್ವ ಇರಬಹುದಲ್ಲ! ಆಕಾಶ/ಸ್ಥಳಾವಕಾಶ/ದೇಶ (I mean 'space') ಭ್ರಮೆಯಾದರೆ ನೀವು ಇಲ್ಲದ ವಸ್ತು/ವಿಷಯದ ಬಗ್ಗೆ ಇಷ್ಟೆಲ್ಲಾ ಚರ್ಚಿಸಿಕೊಂಡು ಯಾಕೆ ಕಾಲಹರಣ ಮಾಡುತ್ತಿದ್ದೀರ?

ಮೊದಲಿಗೆ ವಿಜ್ಞಾನ ಮತ್ತು ಅಧ್ಯಾತ್ಮಜ್ಞಾನ ಇವೆರಡನ್ನೂ ಒಂದನ್ನೊಂದಿಗೆ ಹೊಂದಿಸಿಕೊಂಡು ಏನನ್ನೋ ಅರ್ಥ ಮಾಡಿಕೊಳ್ಳುತ್ತೇವೆ ಎಂದು ಪ್ರಯತ್ನಿಸುವುದೇ ದೊಡ್ಡ ಹೆಡ್ಡತನ. ಅವೆರಡರ ಮಧ್ಯೆ ಇರುವ ವಿರುಧ್ಯಗಳನ್ನು ಗಮನಿಸಿ. ವಿಜ್ಞಾನ ಮನುಷ್ಯರು ತಮ್ಮ ಬುದ್ಧಿವಂತಿಕೆಯಿಂದ ಪ್ರತಿಪಾದಿಸಿದ ಜ್ಞಾನ. ಅಧ್ಯಾತ್ಮಜ್ಞಾನದ ಮೂಲವಾದ ವೇದಗಳನ್ನು ಅನಾದಿ, ಯಾರೂ ಪ್ರತಿಪಾದಿಸಿಲ್ಲ ಎನ್ನುತ್ತಾರೆ. ವಿಜ್ಞಾನ ಎಂದರೆ ವಿಶ್ವಕ್ಕೆ ಸಂಬಂಧಿಸಿದ ಜ್ಞಾನ. ಅದು ಎಷ್ಟೋ ವಿಷಯಗಳನ್ನು ಹೇಳಿದರೂ ಅದರ ಮುಖ್ಯವಾದ ವಿಷಯ ಮನುಷ್ಯನ ಕಣ್ಣಿಗೆ ಕಾಣುವ ಜಗತ್ತು. ಅಧ್ಯಾತ್ಮಜ್ಞಾನ ಎಂದರೆ ಆತ್ಮಕ್ಕೆ ಸಂಬಂಧಿಸಿದ ಜ್ಞಾನ. ಅದು ಎಷ್ಟೋ ವಿಷಯಗಳನ್ನು ಹೇಳಿದರೂ ಅದರ ಮುಖ್ಯವಾದ ವಿಷಯ 'ಆತ್ಮ' ಅಥವಾ 'ಜೀವ'. ಅಧ್ಯಾತ್ಮಜ್ಞಾನ ಸನಾತನಜ್ಞಾನ, ಅಂದರೆ ಯಾವ ಕಾಲದಲ್ಲೂ ಅಧ್ಯಾತ್ಮಜ್ಞಾನ ಬದಲಾಗುವುದಿಲ್ಲ. ಆದರೆ ವಿಜ್ಞಾನ ಇವತ್ತು ಹೇಳಿದ್ದು ಸಾವಿರ ವರ್ಷದ ಹಿಂದೆ ತಪ್ಪು ಎನ್ನುತ್ತಿದ್ದರು, ಸಾವಿರ ವರ್ಷದ ಮುಂದೆಯೂ ತಪ್ಪು ಎನ್ನಬಹುದು. ಉದಾಹರಣೆಗೆ ತಿಳಿದವರೊಬ್ಬರು ನನಗೆ ಹೇಳಿದ ವಿಷಯ -

ಸಾವಿರ ವರ್ಷದ ಹಿಂದೆ "ಜಡವಸ್ತುವೊಂದು ಆಕಾಶದಲ್ಲಿ ಹತ್ತು ಸಾವಿರ ಮೈಲಿ ಹಾರಬಲ್ಲದು" ಎಂದು ಹೇಳಿದರೆ ಎಲ್ಲರೂ ಇದನ್ನು ಹೇಳಿದವರನ್ನು "you are a fool" ಎನ್ನುತ್ತಿದ್ದರು. ಆದರೆ ಈಗ? ವಿಮಾನಗಳಲ್ಲಿ ನಾವೂ ಓಡಾಡಿದ್ದೇವೆ! ಈಗ ವಿಜ್ಞಾನ ಅದನ್ನು ಸಾಧ್ಯ ಎಂದೂ ಹೇಳುತ್ತದೆ. ಮೊದಲು "ಭೂಮಿಯ ಸುತ್ತಲೂ ಸೂರ್ಯ ಸುತ್ತುತ್ತಾನೆ" ಎಂದಾಗಲೂ ವಿಜ್ಞಾನಿಗಳು ತಲೆಯಲ್ಲಾಡಿಸಿದ್ದರು. ಮುಂದೆ ಮತ್ತೊಬ್ಬ "ಸೂರ್ಯನ ಸುತ್ತ ಭೂಮಿ ಸುತ್ತುತ್ತಿದೆ" ಎಂದಾಗಲೂ ವಿಜ್ಞಾನಿಗಳು ತಲೆಯಲ್ಲಾಡಿಸಿದರು. ಒಂದು ಕಾಲದಲ್ಲಿ ಶಬ್ದವನ್ನು ಹತ್ತು ಸಾವಿರ ಮೈಲಿ ದೂರಕ್ಕೆ ತಲುಪಿಸಬಹುದು ಎಂದರೆ ಇದನ್ನು ಹೇಳಿದವನನ್ನು ವಿಜ್ಞಾನಿಗಳು "ಹೆಡ್ಡ ಇವನು, ಹುಚ್ಚಾಸ್ಪತ್ರೆಗೆ ಸೇರಿಸಬೇಕು" ಎನ್ನುತ್ತಿದ್ದರು. ಈಗ ಎಲ್ಲರೂ ಪ್ರಪಂಚದ ಮತ್ತೊಂದು ಮೂಲೆಯಲ್ಲಿರುವವರ ಜೊತೆ ಮೊಬೈಲ್ ಫೋನಿನಲ್ಲಿ ಮಾತನಾಡಿಯೇ ಇದ್ದೇವೆ! ಇವತ್ತು ಇದು ವಿಜ್ಞಾನಕ್ಕೂ ಸರಿಯೇ!

ಇವತ್ತು ನಾವು ಅಸಾಧ್ಯ, ಅವೈಜ್ಞಾನಿಕ ಎನ್ನುವ ಎಷ್ಟೋ ವಿಚಾರಗಳು ಕೆಲವು ವರ್ಷಗಳಲ್ಲಿ ವೈಜ್ಞಾನಿಕವಾಗುತ್ತವೆ. ಅದನ್ನು ನಾವೇ ಪ್ರತ್ಯಕ್ಷ ಸಾಕ್ಷಿಯಾಗಿ ನೋಡುತ್ತಿದ್ದೇವೆ.

ಆದರೆ ಅಧ್ಯಾತ್ಮ ವಿದ್ಯೆ ಎಂದಿಗೂ ಒಂದೇ. ವೇದಗಳು ಅನಾದಿ ಎನ್ನುತ್ತಾರೆ. ಅದನ್ನು ಒಪ್ಪದಿದ್ದರೂ, ಕೊನೆಯ ಪಕ್ಷ ವೇದಗಳು ಬದಲಾದ ದಾಖಲೆ ಎಲ್ಲೂ ಇಲ್ಲ. ಯಾವ ಕಾಲದಲ್ಲೂ ಅದು ಬದಲಾಗುವುದಿಲ್ಲ. ಇಂದಿನ ಪ್ರಪಂಚದಲ್ಲಿರುವ ಜನಕ್ಕೆ ಅರ್ಥವಾಗದ ಎಷ್ಟೋ ವಿಷಯಗಳು ಅಲ್ಲಿವೆ. ಅದನ್ನು ಹಲವು ಆಚಾರ್ಯರು ಹಲವು ರೀತಿಗಳಲ್ಲಿ ಅರ್ಥ ಮಾಡಿಕೊಂಡು ಹಲವು ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ. ಯಾವ ಸಿದ್ಧಾಂತ ಸರಿ ಎನ್ನುವುದು ಈಗ ಅಮುಖ್ಯ, ಆದರೆ ಯಾವ ಆಚಾರ್ಯರು ಹೇಳಿದ ತತ್ವವೂ 'ವಿಜ್ಞಾನ' ಅಲ್ಲ. ವಿಜ್ಞಾನ ಎಂದರೆ ಇಂದಿನ ಪ್ರಪಂಚಕ್ಕೆ ಅರ್ಥವಾಗಿರುವ ವಿಷಯಗಳು ಮಾತ್ರ.

ಇಷ್ಟೊಂದು ವೈರುಧ್ಯಗಳಿರುವ ವಿಜ್ಞಾನ ಮತ್ತು ಅಧ್ಯಾತ್ಮಜ್ಞಾನಗಳನ್ನು ಒಗ್ಗೂಡಿಸಿ ಏನನ್ನೋ ಅರ್ಥ ಮಾಡಿಕೊಳ್ಳಲು ಹೊರಟಿದ್ದೇವೆ ಎನ್ನುವುದು ಹೆಡ್ಡತನ ಎಂದು ಅದಕ್ಕೇ ಹೇಳಿದ್ದು.

ಇನ್ನಾದರೂ ಈ ವಿಜ್ಞಾನವನ್ನು ಕುರಿತಾದ ಬ್ಲಾಗಿನಲ್ಲಿ ಅಧ್ಯಾತ್ಮ ಬೆರಸದೇ ಪೂರ್ಣವಾಗಿ ವೈಜ್ಞಾನಿಕವಾಗಿ ಚರ್ಚೆ ನಡೆಯುವುದನ್ನು ನೋಡಲಿಚ್ಛಿಸುತ್ತೇನೆ.

Ramesh BV (ಉನ್ಮುಖಿ) said...

ಶ್ರೀಕಾಂತರೇ,


ನಮ್ಮ ಉದ್ದೇಶವಾದರೂ ಏನು? ಈ ಅಸ್ತಿತ್ವದ ರಹಸ್ಯವನ್ನು ತಿಳಿದುಕೊಳ್ಳಬೇಕು, ಯಥಾರ್ಥದ ಅರಿವು ನಮಗಾಗಬೇಕು, ನಮ್ಮ ಕುತೂಹಲ ತಣಿಯಬೇಕು, ಇಷ್ಟೆ ತಾನೆ? ತಿಳಿದುಕೊಳ್ಳುವ ಮಾರ್ಗ ಅಧ್ಯಾತ್ಮವಾದರೇನು ವಿಜ್ಞಾನವಾದರೇನು, ನಮಗೆ ಬೇಕಾದ್ದು ಸತ್ಯ, ಕೇವಲ ಸತ್ಯ ಮಾತ್ರ. ವಿಜ್ಞಾನವಾಗಲಿ ಅಧ್ಯಾತ್ಮವಾಗಲಿ ಎರಡೂ ಮನುಷ್ಯ ತನ್ನ ಕುತೂಹಲ ತಣಿಸಿಕೊಳ್ಳಲು ಆರಿಸಿಕೊಂಡ ಮಾರ್ಗಗಳಷ್ಟೆ. ಎರಡರ ಉದ್ದೇಶವೂ ಒಂದೇ. ಉದ್ದೇಶ ಒಂದೇ ಆದ ಮೇಲೆ ಉಪಾಧಿಗಳ ಗೊಡವೆಯೇಕೆ ನಮಗೆ? ವಿಜ್ಞಾನ, ಅಧ್ಯಾತ್ಮಗಳೇನು semetic ಮತಗಳೇ, ಪರಸ್ಪರ ಮಿಶ್ರಗೊಳ್ಳದೆ ಶುದ್ಧತೆ ಕಾಪಾಡಿಕೊಳ್ಳುವುದಕ್ಕೆ? ವಿಜ್ಞಾನ ಮತ್ತು ಅಧ್ಯಾತ್ಮಗಳು ವಿಭಿನ್ನ ಶಾಖೆಗಳಾಗಿಯೇ ವಿಕಾಸಗೊಳ್ಳಬೇಕು, ಪರಸ್ಪರ ಶುದ್ಧತೆ ಕಾಪಾಡಿಕೊಳ್ಳಬೇಕು ಎನ್ನುವುದೇ ಹೆಡ್ಡತನ. ಸರಿಯಾಗಿ ಹೇಳಬೇಕೆಂದರೆ ವಿಜ್ಞಾನ ಮತ್ತು ಅಧ್ಯಾತ್ಮಗಳಿಗೆ ಭೇದವಿಲ್ಲ.

ವಿಜ್ಞಾನ, ಅಧ್ಯಾತ್ಮ ಎನ್ನುವ ವಿಭಜನೆ ತೀರಾ ಇತ್ತೀಚಿನದು. ಪಾಶ್ಚಾತ್ಯ ಚಿಂತನೆಗಳನ್ನು ಯಥಾವತ್ತಾಗಿ, ಯಾವ ಬದಲಾವಣೆಗಳಿಲ್ಲದೆ ಒಪ್ಪಿಕೊಳ್ಳುವ ಭರದಲ್ಲಿ ನಮ್ಮ ಪಾರಂಪರಿಕ ಜ್ಞಾನದ ಧ್ಯೇಯೋದ್ದೇಶಗಳೂ ತಥಾಕಥಿತ ವಿಜ್ಞಾನದ ಉದ್ದೇಶಕ್ಕಿಂತ ಭಿನ್ನವಾದವೇನಲ್ಲ ಎಂಬುದನ್ನು ಅರಿಯದಷ್ಟು ಮೂರ್ಖರಾಗಿದ್ದೇವೆ. Alber ಹೇಳುತ್ತಾನೆಂದರೆ ಕುರುಡಾಗಿ ನಂಬುವ ನಾವು ದಕ್ಷಿಣಾಮೂರ್ತಿ ಸ್ತೋತ್ರಕ್ಕೆ ಬಂದರೆ ಅದರ ಪೂರ್ವ ಅಪರ ವಿಚಾರಿಸದೆ ಪಕ್ಕಕ್ಕೆ ಸರಿಸುತ್ತೇವೆ, ಅಧ್ಯಾತ್ಮ ಎನ್ನುವ ಪಟ್ಟ ಕೊಟ್ಟು. ನಮಗೆ ಹೆಸರುಗಳು ಮುಖ್ಯವಾಗಬಾರದು. ಯಾವುದು ಈ ಕಾಲಕ್ಕೆ, ಜನಕ್ಕೆ ಸಲ್ಲುತ್ತದೆಯೋ ಅದನ್ನು ಅನುಸರಿಸುವುದು ಎಲ್ಲರೂ ಮಾಡುವ ಕೆಲಸ. "ನದಿಗೆದುರೀಸುತ ಹೋಗುವುದಾದರೆ ಜೀವಂತ ಮತ್ಸ್ಯವೇ ಬೇಕು, ಹೊಳಹಿನ ದಿಕ್ಕಲ್ಲಿ ಸಾಗುವುದಾದರೆ ಕೊಳೆತೊಂದು ಕಸಕಡ್ಡಿ ಸಾಕು." ಎಲ್ಲರೂ ಒಂದೇ ರೀತಿಯಲ್ಲಿ ಯೋಚಿಸಬೇಕು, uniformity, conformity ಇರಬೇಕು ಎನ್ನುವುದೆಲ್ಲ ಕೂಪ ಮಂಡೂಕ ಪ್ರವೃತ್ತಿ, ನಮಗೆ ಸತ್ಯದ ಅರಿವು ಉಂಟಾಗಲು ವಿಜ್ಞಾನ ಒಂದು ಮಾರ್ಗವನ್ನು ತೋರುತ್ತದೆ, ಅಷ್ಟೆ. ಅದೊಂದೇ ಮಾರ್ಗವಲ್ಲ. ವಿಜ್ಞಾನ ಸರಿಯೇ ತಪ್ಪೇ ಎನ್ನುವುದರ ಮಾನದಂಡವೂ ವಿಜ್ಞಾನವೇ ಆದರೆ, ವಿಜ್ಞಾನ ಎಂದೆಂದಿಗೂ ತಪ್ಪಾಗಲಾರದು. ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಂತೆ ಇದು.

ವಿಜ್ಞಾನ ಮತ್ತು ಅಧ್ಯಾತ್ಮದ ಭಿನ್ನತೆ ಏನು ಗೊತ್ತೇ?
ಪ್ರಾಚೀನ ತಾತ್ವಿಕರ ಪ್ರಯತ್ನಗಳು ತಮ್ಮ ಪ್ರಯತ್ನಗಳಿಗೆ ಯಾವ ಹೆಸರನ್ನೂ ಕೊಡುವ ಗೊಡವೆಗೆ ಹೋಗಿಲ್ಲ. ಅವರಿಗೆ ಸತ್ಯಶೋಧನೆ ಮುಖ್ಯವಾಗಿತ್ತೇ ಹೊರತು ಯಾವ ಮಾರ್ಗವನ್ನೂ ಸಾಬೀತುಪಡಿಸುವ ಇರಾದೆ ಇರಲಿಲ್ಲ. ಅವರ ಪ್ರಯತ್ನಗಳಿಗೆ ಎರಡು ಮುಖಗಳಿದ್ದವು. ಒಂದು, ಬಹಿರ್ಜಗತ್ತು ಅಥವಾ ಭೌತಿಕ ಜಗತ್ತು (time, space, causation..); ಸಾಂಖ್ಯ, ಕಣಸಿದ್ಧಾಂತ.. ಇತ್ಯಾದಿಯಾಗಿ. ಮತ್ತೊಂದು ಆಂತರಿಕ ಜಗತ್ತು (ಮನಸ್ಸು, ಚಿತ್, ಆತ್ಮ...). ಪ್ರಾರಂಭದಲ್ಲಿ ಅಂತರ್ ಬಾಹ್ಯ ಭೇದಗಳನ್ನು ಎಣಿಸಲಿಲ್ಲವಾದರೂ, ಕಾಲ ಕಳೆದಂತೆ ಭೌತಿಕ ಜಗತ್ತನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಗಳು ಸಾಫಲ್ಯ ಹೊಂದುವುದಿಲ್ಲ ಎನ್ನುವುದನ್ನು ಅರಿತು, ತಮ್ಮೆಲ್ಲ ಪ್ರಯತ್ನಗಳನ್ನೂ ಆಂತರಿಕ ಜಗತ್ತಿನ ಶೋಧನೆಗೇ ಮೀಸಲಿಟ್ಟರು. ಅರಿವಿನ ಹರವು ಇನ್ನೂ ವಿಸ್ತಾರವಾದಂತೆ, ಯಾವ ಮಾರ್ಗದಿಂದಲಾದರೂ ನಾವು ಸತ್ಯವನ್ನು ತಲುಪಬಹುದು ಎಂದು ಕಂಡುಕೊಂಡರು. ಹೇಗೇ ಹೊರಟರೂ ಎಲ್ಲರೂ ತಲುಪುವುದು ಒಂದೇ ಗುರಿಯೆಡೆಗೆ; ಏಕೆಂದರೆ ನಿಜವಾಗಿ ವಿಶ್ವದಲ್ಲಿ ಅಂತರ್ ಬಾಹ್ಯ ಭೇದಗಳಿಲ್ಲ. ಬಾಹ್ಯ ಭೌತಿಕ ಮಾರ್ಗ ಸ್ವಲ್ಪ ದೂರವಾಗಬಹುದು ಅಷ್ಟೆ.

ಈಗಿನ ವಿಜ್ಞಾನ ಎಂದು ಕರೆಯಲ್ಪಡುವ ಜ್ಞಾನ ಶಾಖೆ ಸತ್ಯದ ಗುತ್ತಿಗೆ ಹಿಡಿದಂತೆ ವರ್ತಿಸುತ್ತಿದೆ.



ಬಾಹ್ಯ ಭೌತಿಕ ಮಾರ್ಗವನ್ನು ಹಿಡಿದಿದೆ. ಅದರ ಆವೇಗವನ್ನು ನೋಡಿದರೆ ಇಂದಲ್ಲ ನಾಳೆ ಎಲ್ಲವನ್ನೂ ತಿಳಿದುಕೊಂಡೇ ತೀರುವೆನು ಎಂದು ಹೊರಟಂತಿದೆ. ಆದರೆ ಇದು ಸಾಧ್ಯವೇ ಇಲ್ಲ ಎನ್ನುತ್ತಾನೆ ತತ್ವಜ್ಞಾನಿ. ವಿಜ್ಞಾನದ ಕಾರ್ಯವಿಧಾನವನ್ನೊಮ್ಮೆ ಗಮನಿಸಿ.

1.
ವಿಜ್ಞಾನ, ಪಂಚೇಂದ್ರಿಯಗಳಿಗೆ ನಿಲುಕುವ ಮತ್ತು/ಅಥವಾ ಭೌತಿಕ ಸಲಕರಣೆಗಳಿಂದ ಅಳೆಯಬಹುದಾದ ಪರಿಮಾಣಗಳಿಂದ (metric) ದೊರಕುವ ಜ್ಞಾನವನ್ನು, ಮತ್ತು, ಆ ಜ್ಞಾನದ ಸಹಾಯದಿಂದ ಮನಸ್ಸಿನ ವಿಕ್ಷೇಪಗಳ ಮೂಲಕ ನಾವು ಹೊರತರಬಹುದಾದ ನಿರ್ಧಾರಗಳನ್ನು ಮಾತ್ರವೇ ಒಪ್ಪುತ್ತದೆ. ಇಲ್ಲಿ ಗಮನಿಸಬೇಕಾದ್ದು, ಯಾವುದಾದರೂ ಅಳೆಯುವಿಕೆಯ ಪರಿಧಿಯನ್ನು ಮೀರಿದ ಸಂಗತಿಯಿದ್ದರೆ, ಮನಸ್ಸಿಗೆ ನಿಲುಕದ ಸಂಗತಿಯಿದ್ದರೆ, ಅದು ವೈಜ್ಞಾನಿಕನ ಗಮನಕ್ಕೆ ಬಾರದೇ ಹೋಗುತ್ತದೆ. Science just misses it. ಇನ್ನೂ ಒಂದು ಮುಖ್ಯ ಸಂಗತಿ, ಯಾವುದೇ ಅಳೆಯುವಿಕೆಯ, ಅನುಭವಿಸುವಿಕೆಯ ಪ್ರಕ್ರಿಯೆಯಲ್ಲಿ translation ಇದೆ. ಉದಾಹರಣೆಗೆ, ನಾವು ವಸ್ತುವೊಂದನ್ನು ನೋಡುವಾಗ, ಬೆಳಕು ಆ ವಸ್ತುವಿನ ಮೇಲೆ ಬಿದ್ದು, ಪ್ರತಿಫಲನಗೊಂಡು, ಕಣ್ಣಿನ ಪರದೆಯನ್ನು (retina) ತಲುಪಿ ವಿದ್ಯುತ್ ಪ್ರತಿಸ್ಪಂದನಗಳಾಗಿ ಬದಲಾಗುತ್ತದೆ. ನಂತರ ನರಗಳ ಸಹಾಯದಿಂದ ಮೆದುಳನ್ನು ತಲುಪಿ, ಬುದ್ಧಿ ಅದನ್ನು ದೃಶ್ಯವೆಂಬುದಾಗಿ ಅರ್ಥೈಸುತ್ತದೆ. ನಾವು ನೋಡುವುದೇ ಬೇರೆ, ಅಲ್ಲಿರುವುದೇ ಬೇರೆ. ಹಲವು ಹಂತಗಳ translationನಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಜಗತ್ತು ನಮಗೆ ತೋರುವ ರೀತಿಯೇ ಬೇರೆ. ಹಾಗಾಗಿ ಅನುಭವಿಸುವಿಕೆ, ಅಳೆಯುವಿಕೆ ಇವ್ಯಾವುವೂ ಸತ್ಯವನ್ನು ತಲುಪುವುದಿಲ್ಲ. ಎಲ್ಲ ಕನಸು.
2.
ವಿಜ್ಞಾನ ಕೆಲವೊಂದು ಊಹನೆಗಳಿಂದ (assumptions) ಪ್ರಾರಂಭವಾಗುತ್ತದೆ. ಊಹನೆಗಳ ಉದ್ದೇಶವೇ ಸರಳೀಕರಣ. ಹಾಗಾಗಿ ತನ್ನ ಕಾರ್ಯವಿಧಾನದಲ್ಲಿ ಯಥಾಸ್ಥಿತಿಯನ್ನು ಪೂರ್ಣವಾಗಿ ಪ್ರತಿನಿಧಿಸುವಲ್ಲಿ ವಿಜ್ಞಾನ ಎಡವುತ್ತದೆ.
3.
ಊಹನೆಗಳಿಂದ ಪ್ರಾರಂಭವಾದ ವೈಜ್ಞಾನಿಕ (!) ಪ್ರಕ್ರಿಯೆ, ಮುಂದೆ ತರ್ಕವನ್ನು (logic) ಆಧರಿಸಿ ಮುಂದೆ ಸಾಗುತ್ತದೆ. ಕೊನೆಗೊಂದು ಉಪಲಬ್ಧ (result) ದೊರೆಯುತ್ತದೆ, ಅದನ್ನು ನಾವು ನಿಜವೆಂದು ನಂಬುತ್ತೇವೆ. ಜಗತ್ತನ್ನು ಅರಿಯಲು ತರ್ಕವೇ ಸರಿ ಎಂಬ ನಿರ್ಧಾರಕ್ಕೆ ನಾವು ಬಂದುದುದಾದರೂ ಹೇಗೆ? ತರ್ಕ ಒಂದು ವಿಧಾನ, nonintermittantly connected, ಮನಸ್ಸಿನ ಸ್ವಭಾವಕ್ಕೆ ಹೊಂದುವಂತದ್ದು. ಅದೇ ಅಂತಿಮವಲ್ಲ.



ಹುಂ, ಯಾವುದೇ

ಮತಶ್ರದ್ಧೆಗಿಂತ ಭಿನ್ನವಾಗಿದೆಯೇ ವಿಜ್ಞಾನ? ವಿಜ್ಞಾನ ಇದೇ ಜಾಡು ಹಿಡಿದು ಹೊರಟರೆ ಏನು ಗತಿ? ಅದು ವಿಜ್ಞಾನ ಎಂದು ಕರೆಸಿಕೊಳ್ಳುವ ಅರ್ಹತೆಯನ್ನೆ ಕಳೆದುಕೊಳ್ಳುತ್ತದೆಯಷ್ಟೆ. ಬರುಬರುತ್ತ ವಿಜ್ಞಾನ ಅಧ್ಯಾತ್ಮವಾಗಲೇಬೇಕು. ಒಂದು ಊರನ್ನು ತಲುಪಲು ನಾವು ಬೇರೆ ಬೇರೆ ಮಾರ್ಗಗಳನ್ನು ಆರಿಸಿಕೊಂಡರೂ, ಊರು ಹತ್ತಿರವಾದಂತೆಲ್ಲ ದೃಶ್ಯಗಳು ಒಂದೇ ತರಹದವುಗಳಾಗುತ್ತವೆ. ಹಾಗೆಯೇ ಇದು. ಸಂತೋಷದ ಸಂಗತಿಯೆಂದರೆ ನೈಜ ವೈಜ್ಞಾನಿಕ ಮನೋಭಾವದವರು, ಖಚಿತತೆ ನೀಡುವ ವೈಜ್ಞಾನಿಕ ವಿಧಾನಗಳು ಸತ್ಯದ ಹತ್ತಿರ ಹೋದಂತೆಲ್ಲ ಅಪ್ರಸ್ತುತವಾಗುತ್ತವೆ ಎಂದು ಅರ್ಥಮಾಡಿಕೊಂಡಿದ್ದಾರೆ. ಸತ್ಯವೆನ್ನುವುದು ಅನುಭವಿಸುವಿಕೆಯ, ಅರ್ಥಮಾಡಿಕೊಳ್ಳುವಿಕೆಯ, ವಿಷಯೀಕರಿಸುವ, ಪರಿಧಿಗೆ ಮೀರಿದ್ದು ಎನ್ನುವ ಚಿಂತನೆಗಳಿಗೆ ಪುಷ್ಟಿ ದೊರೆಯುತ್ತಿದೆ. ಅದುವೇ ಅಧ್ಯಾತ್ಮ. ಆ ಪದದ ಬಗ್ಗೆ ದುರಾಗ್ರಹವೇಕೆ?



@[ವಿಜ್ಞಾನ ಎಂದರೆ ವಿಶ್ವಕ್ಕೆ ಸಂಬಂಧಿಸಿದ ಜ್ಞಾನ. ಅದು ಎಷ್ಟೋ ವಿಷಯಗಳನ್ನು ಹೇಳಿದರೂ ಅದರ ಮುಖ್ಯವಾದ ವಿಷಯ ಮನುಷ್ಯನ ಕಣ್ಣಿಗೆ ಕಾಣುವ ಜಗತ್ತು. ಅಧ್ಯಾತ್ಮಜ್ಞಾನ ಎಂದರೆ ಆತ್ಮಕ್ಕೆ ಸಂಬಂಧಿಸಿದ ಜ್ಞಾನ]

ಹಾಗಾದರೆ ಆತ್ಮ ವಿಶ್ವಕ್ಕೆ ಸಂಬಂಧಿಸಿಲ್ಲವೋ? ವಿಜ್ಞಾನವಾಗಲಿ, ಅಧ್ಯಾತ್ಮವಾಗಲಿ ಎರಡೂ ವಿಶ್ವವನ್ನರಿಯುವ ಪ್ರಯತ್ನಗಳೇ, ಜ್ಞಾನ ಅಲ್ಲ, ಪ್ರಯತ್ನಗಳು. ಪ್ರಯತ್ನಗಳು ಸಂಪೂರ್ಣ ಸಾಫಲ್ಯವನ್ನು ಹೊಂದಿದರೆ ಸಿಗುವುದು ಅರಿವು (Not Experience), ಜ್ಞಾನ (Not Knowledge). ವಿಜ್ಞಾನ, ವಿಶ್ವವನ್ನು ವಸ್ತು, ಶಕ್ತಿ, ಅವಕಾಶ, ಸಮಯ.. ಇತ್ಯಾದಿಗಳ ಸಮುಚ್ಚಯದಂತೆ ನೋಡಿದರೆ, ಅಧ್ಯಾತ್ಮ, ಇದೆಲ್ಲವನ್ನೂ ’ನಾನೇ’ ಎಂಬುದಾಗಿ ನೋಡುತ್ತದೆ. ಎರಡಕ್ಕೂ ಯಾವ ವ್ಯತ್ಯಾಸವೂ ಇಲ್ಲ, ಅರಿವಿನ ಎತ್ತರದಲ್ಲಿ ಮಾತ್ರ ವ್ಯತ್ಯಾಸವಿದೆ, ಗುಣದಲ್ಲಲ್ಲ.



@[ಎಲ್ಲಿ ದಕ್ಷಿಣಾಮೂರ್ತಿ, ಎಲ್ಲಿ ಆಕಾಶ! ಆದರೂ ಇದನ್ನು ಚರ್ಚಿಸಿರುವುದರಿಂದ ನನಗನ್ನಿಸಿದ್ದನ್ನು ಹೇಳುತ್ತೇನೆ. ಇಲ್ಲದ್ದು ಇದೆ ಎನ್ನಿಸಿದರೆ ಅದನ್ನು "ಭ್ರಮೆ" ಎಂದು ಕರೆಯುತ್ತಾರೆ. ಸ್ವತಂತ್ರ ಅಸ್ತಿತ್ವ ಇಲ್ಲ ಎಂದ ಮಾತ್ರಕ್ಕೆ ಭ್ರಮೆ ಎಂದು ಹೇಗೆ ಹೇಳುತ್ತೀರೋ ಗೊತ್ತಿಲ್ಲ. ಅಸ್ವತಂತ್ರವಾಗಿಯಾದರೂ ಅಸ್ತಿತ್ವ ಇರಬಹುದಲ್ಲ! ಆಕಾಶ/ಸ್ಥಳಾವಕಾಶ/ದೇಶ (I mean 'space') ಭ್ರಮೆಯಾದರೆ ನೀವು ಇಲ್ಲದ ವಸ್ತು/ವಿಷಯದ ಬಗ್ಗೆ ಇಷ್ಟೆಲ್ಲಾ ಚರ್ಚಿಸಿಕೊಂಡು ಯಾಕೆ ಕಾಲಹರಣ ಮಾಡುತ್ತಿದ್ದೀರ?]

ಶುದ್ಧ ಸುಳ್ಳು. ಭ್ರಮೆಯನ್ನು ಅರ್ಥೈಸುವಲ್ಲಿ ಎಡವಿದ್ದೀರಿ. What you mean in your comment is illusion. ಆದರೆ ಅದರ ನೈಜ ಅರ್ಥ Delusion. Delusion is something that is actually there, but is misrepresented in our mind because of its own nature. ವಿವೇಕಾನಂದರ ಜ್ಞಾನಯೋಗವನ್ನು ಓದಿ. ಮಾಯೆ (ಮಾಯಾಕಲ್ಪಿತದೇಶಕಾಲಕಲನಾ) ಅಂದರೆ ಭ್ರಮೆ(Illusion) ಅಲ್ಲ ಎನ್ನುವುದನ್ನು ವಿವರಿಸುವುದಕ್ಕೆ ಮೂರು ಅಧ್ಯಾಯಗಳನ್ನೇ ಮೀಸಲಿಟ್ಟಿದ್ದಾರೆ. ಸತ್ಯದ ರೂಪವನ್ನು ಖಚಿತಪಡಿಸಲಾಗದು. ಉದಾಹರಣೆಗೆ, ವಸ್ತುವನ್ನು ಇದೆಯೆಂದೂ ಸಾಬೀತುಪಡಿಸಬಹುದು, ಇಲ್ಲವೆಂದೂ ಸಾಬೀತುಪಡಿಸಬಹುದು. ಯಾವುದು ಸತ್ಯ? ಹೇಳಲಾಗದು. ಇದೇ ಜಗತ್ತನ್ನು ಬೇರೊಂದು ಅರಿವಿನ ಸ್ತರದಿಂದ ನೋಡಿದಾಗ, ಅದು ಬೇರೆಯೇ ಆಗಿ ಕಾಣುತ್ತದೆ. ಹಾಗಾಗಿ ಅದು ಭ್ರಮೆ. ಆದರೆ ಅದು ಹಾಗೆ ನೋಡಿದಾಗ ಇದೆಯಲ್ಲ, ಹಾಗಾಗಿ ಅದು ಸತ್ಯ, ಸಾಪೇಕ್ಷ ಸತ್ಯ. ನಾವು ಈಗಿನ ಅರಿವಿನ ಸ್ತರದಿಂದ ಪ್ರಯಾಣ ಬೆಳೆಸಬೇಕಾಗಿದೆ, ಹಾಗಾಗಿ ಇಲ್ಲಿ ಸಿಗುವ ಅವಕಾಶಗಳನ್ನು ಉಪಯೋಗಿಸಲೇಬೇಕು. ಅದಕ್ಕಾಗಿಯೇ - ಮನಸ್ಸಿದೆ ಬುದ್ಧಿಯನ್ನು ಉಪಯೋಗಿಸುತ್ತಿದ್ದೇವೆ, ಕಾಲ ಇದೆ ಕಾಲಹರಣ ಮಾಡುತ್ತಿದ್ದೇವೆ.



@[ಆದರೆ ಅಧ್ಯಾತ್ಮ ವಿದ್ಯೆ ಎಂದಿಗೂ ಒಂದೇ. ವೇದಗಳು ಅನಾದಿ ಎನ್ನುತ್ತಾರೆ. ಅದನ್ನು ಒಪ್ಪದಿದ್ದರೂ, ಕೊನೆಯ ಪಕ್ಷ ವೇದಗಳು ಬದಲಾದ ದಾಖಲೆ ಎಲ್ಲೂ ಇಲ್ಲ. ಯಾವ ಕಾಲದಲ್ಲೂ ಅದು ಬದಲಾಗುವುದಿಲ್ಲ]

ಅಧ್ಯಾತ್ಮ ವಿದ್ಯೆ ಎಂದಿಗೂ ಒಂದೇ ಅಲ್ಲ. ಮನುಷ್ಯ ಅನ್ನುವ ಪ್ರಜ್ಞೆಯ ಒಂದು ಹಂತಕ್ಕೆ, ಒಂದು ರೀತಿಗೆ ಮಾತ್ರ ಅನ್ವಯಿಸುವಂತದ್ದು ನಾವು ನೋಡುವ ಅಧ್ಯಾತ್ಮ ವಿದ್ಯೆ. ಬೇರಾವುದೋ ಪ್ರಾಣಿಗೋ, ಗ್ರಹಕ್ಕೋ, ನಕ್ಷತ್ರಕ್ಕೋ ಇದು ಅನ್ವಯಿಸಲಾರದು. ವೇದಗಳಲ್ಲ ಅನಾದಿ, ವಿಶ್ವ (ಅರ್ಥ ಮಾಡಿಸಲು ಮಾತ್ರ ಉಪಯೋಗಿಸುತ್ತಿದ್ದೇನೆ!) ಅನಾದಿ, ಅದಕ್ಕೆ ಸಂಬಂಧಪಟ್ಟ (ಯಾವುದಕ್ಕೂ ಸಂಬಂಧಪಡದ!) ಸತ್ಯ ಅನಾದಿ. ನಮ್ಮ ಪ್ರಜ್ಞೆಯ, ಅರಿವಿನ ಎತ್ತರ, ಅರಿವಿನ ವಿಧ ಬದಲಾಗದ ಹೊರತು ವೇದಗಳು ಬದಲಾಗುತ್ತಾವಾದರೂ ಹೇಗೆ? ಹಾಸ್ಯಾಸ್ಪದ. ಅರಿವು ಬದಲಾದಂತೆ ಎಲ್ಲವೂ ಬದಲಾಗುತ್ತದೆ. ವೇದಗಳೇನು ಅಧಿಕೃತವಾಗಿ ಪರಲೋಕದಿಂದ ಉದುರಿದ ಅಣಿಮುತ್ತುಗಳೇ? ವೇದಗಳು ತಮ್ಮನ್ನು ತಾವೇ ಅಲ್ಲಗಳೆದುಕೊಳ್ಳುತ್ತವೆ ಗೊತ್ತೇ? ಅದೇ ಅವುಗಳ ಔನ್ನತ್ಯ. ಖಚಿತತೆ ಇಲ್ಲದಿರುವಿಕೆ. ಖಚಿತತೆಯನ್ನು ಬಯಸುವುದು ಮೂರ್ಖ ಮನಸ್ಸು ಮಾತ್ರ. "Idiots are very very clear, for they do not have the intelligence to feel confusion - ಓಶೋ".



ಇನ್ನು ವೈರುಧ್ಯಮಯ ಉದಾಹರಣೆಗಳ ಬಗ್ಗೆ ಗಮನ ಸೆಳೆದಿದ್ದೀರಿ. ಉಪಮೆ ಯಾಕೆ ಕೊಡುತ್ತೇವೆ? ಉಪಮಾನ ಉಪಮೇಯದ ಸಾಮಾನ್ಯ ಗುಣವನ್ನು ಅಥವಾ ಹೋಲಿಸಬಹುದಾದ ಗುಣವನ್ನು ಉದಾಹರಿಸಿ ಅರ್ಥಮಾಡಿಸಲು. ಅದರರ್ಥ ಉಪಮಾನ ಉಪಮೇಯದ ಯಥಾಪ್ರತಿ ಎಂದೇ? ರಾಮಕೃಷ್ಣ ಪರಮಹಂಸರ ದೃಷ್ಟಾಂತವೊಂದನ್ನು ಕೇಳಿ. ಬಂಕಿಮಚಂದ್ರರು ಪರಮಹಂಸರ ಜೊತೆ ಮಾತುಕತೆಯಲ್ಲಿ ತೊಡಗಿದ್ದಾಗ, ಇದೇ ರೀತಿಯದ್ದೇನೋ ತಕರಾರು ಎತ್ತಿದರು. ಅದಕ್ಕೆ ಪರಮಹಂಸರು, ನೀನು ಪಂಡಿತನಲ್ಲವೇನಯ್ಯಾ? ಉಪಮೆ ಏಕೆ ಕೊಡುತ್ತೇವೆ? ಒಬ್ಬ ಹುಲಿ ಇದ್ದಂತಿದ್ದಾನೆ ಎಂದರೆ ಅವನಿಗೆ ಗಡಿಗೆಯಂಥಾ ಮುಖವೊಂದಿದೆ, ಮೈತುಂಬಾ ಪಟ್ಟೆಯಿದೆ, ಮಾರುದ್ದ ಬಾಲವಿದೆ ಎಂದು ಅರ್ಥವಾ? ಎಲ್ಲರೂ ಗೊಳ್ಳ್ ಎಂದು ನಕ್ಕರು. ನನಗೂ ಹಾಗೇ ಅನ್ನಿಸುತ್ತಿದೆ. ಅದ್ವೈತ ವಿಶಿಷ್ಟಾದ್ವೈತಗಳ ಸಾಮ್ಯತೆ, ವೈರುಧ್ಯತೆ ಎಲ್ಲಿದೆ ಎಂಬುದು ಗೊತ್ತೇ? ಹೋಗಲಿ ವೈರುಧ್ಯತೆಯಿದ್ದರೇನು ಉದಾಹರಣೆ ಕೊಟ್ಟು ಅರ್ಥಮಾಡಿಸುವುದು ತಪ್ಪೇ. ಮತ್ತೆ, ಪೂರ್ಣ ಅಂದರೆ ಶೂನ್ಯ/ಅನಂತ ಎಂದರ್ಥ. ಪೌರ್ವಾತ್ಯ ಚಿಂತನೆಗಳು ಶೂನ್ಯಕ್ಕೂ ಅನಂತಕ್ಕೂ ವ್ಯತ್ಯಾಸ ಎಣಿಸುವುದಿಲ್ಲ. ನನಗಿದು ಸರಿಯೆನ್ನಿಸುತ್ತಿದೆ, ನಿಮಗೂ ಹಾಗೇ ಅನ್ನಿಸುವಂತೆ ಮಾಡಲಾರೆ.



ವಿಜ್ಞಾನ ಬದಲಾಗುತ್ತದೆ, ವೇದ ಬದಲಾಗುವುದಿಲ್ಲ ಎನ್ನುವುದು, ವೇದಗಳ ಬಗೆಗಿನ ನಿಮ್ಮ ಅಭಿಮಾನವನ್ನಷ್ಟೇ ತೋರಿಸುತ್ತಿದೆ. ಇಬ್ಬರ ಚಿಂತನೆಯ ನೆಲೆಯೂ ಒಂದೇ ಆಗದ ಹೊರತು ಎಲ್ಲಿ ತಪ್ಪಿದೆ ಎಂದು ಹೇಳುವುದು ಆಗದ ಮಾತು.



-
ಶಶಾ೦ಕ ಜಿ.ಪಿ. (ಉನ್ಮುಖಿ)

Srikanth - ಶ್ರೀಕಾಂತ said...

@ಶಶಾಂಕ - ಸರಿ ಸಾರ್.

Lakshmi Shashidhar Chaitanya said...

ಶಶಾಂಕರೇ/ರಮೇಶ್ ಅವರೇ,

ನಾನು ಈ ಬ್ಲಾಗನ್ನು ಶುರು ಮಾಡಿದ ಉದ್ದೇಶ ವಿಜ್ಞಾನದ ಕೆಲ ಕುತೂಹಲಕಾರಿ ವಿಷಯಗಳನ್ನು ಜನರಿಗೆ ಕನ್ನಡದಲ್ಲಿ ತಲುಪಿಸುವುದು ಮತ್ತು ವಿಜ್ಞಾನವನ್ನು ಜನಪ್ರಿಯಗೊಳಿಸುವುದು.ನೀವು ನೋಡಿದರೆ ಅಧ್ಯಾತ್ಮ ತಂದಿಟ್ಟಿದ್ದೀರಿ !! ಮಾತು ಮಾತಿಗೂ ಶಂಕರ ರಾಮಾನುಜರಿಂದ ಆರಂಭಿಸಿ ವಿವೇಕಾನಂದ ಓಶೋರವರೆಗೂ ಮಾತಾಡುತ್ತೀರಿ ? ನೋಡಿ, ನೀವು ಅತ್ಯಮೋಘ ಸಾಧಕರಾಗಿದ್ದು ತತ್ವಚಿಂತನಾಪರರಾಗಿ ಆತ್ಮೋನ್ನತಿಯನ್ನು ಹೊಂದುವ ದಾರಿಯಲ್ಲಿ ಪಯಣವನ್ನು ದೊಡ್ಡ ದೊಡ್ಡ ಹೆಜ್ಜೆಯಿಟ್ಟು ಮುಂದುವರೆಸುತ್ತಿರಬಹುದು. ಆದರೆ ನನಗೆ ಮತ್ತು ಈ ಬ್ಲಾಗಿಗೆ ಈ ಉದ್ದೇಶ ಇಲ್ಲ. ಇದು ವಿಜ್ಞಾನಕ್ಕೆ ಮೀಸಲಾದ ಬ್ಲಾಗು. ಆಧ್ಯಾತ್ಮಕ್ಕೆ ಇಲ್ಲಿ ಅವಕಾಶ ಇಲ್ಲ.

ಅದಕ್ಕೆ ನಾನು ನನ್ನ ಕಮೆಂಟಿನಲ್ಲಿ ಆ ಶ್ಲೋಕದ ಔಚಿತ್ಯ ಕೇಳಿದ್ದು. ನೀವು ಆ ಪ್ರಶ್ನೆಯನ್ನು ಪ್ರಾಯಶಃ ಗಮನಿಸಿಲ್ಲ. ಆದರೆ ಶ್ರೀಕಾಂತರಿಗೆ ನೀವು ಉತ್ತರಿಸುತ್ತಾ ನಿಮ್ಮ ಉದ್ದೇಶ ಎಲ್ಲವನ್ನೂ ಆಧ್ಯಾತ್ಮ ದೃಷ್ಟಿಯಲ್ಲಿ ನೋಡುತ್ತಿದ್ದೀರಿ ಎಂದು ಸ್ಪಷ್ಟವಾಗಿ ಹೇಳಿದ್ದೀರಿ. ಆದ್ದರಿಂದ ನಾನು ಈ ಬ್ಲಾಗಿನ ಉದ್ದೇಶವನ್ನು ಇಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ. ನಿಮಗೆ ಅಧ್ಯಾತ್ಮದಲ್ಲಿ ಆಸಕ್ತಿಯಿದ್ದು ವಿಜ್ಞಾನ-ಆಧ್ಯಾತ್ಮಗಳ ಸಾಮ್ಯ, ಒಡಂಬಡಿಕೆ, ಭೇದ, ಮಹತ್ವ, ಹಿರಿತನ ಇವೇ ಮುಂತಾದವುಗಳನ್ನು ಜನರಿಗೆ ಹೇಳಬೇಕೆಂದು ಉತ್ಕಟವಾದ ಅಪೇಕ್ಷೆಯಿದ್ದರೆ ಅದನ್ನು ಈ ಬ್ಲಾಗಿನ ಕಮೆಂಟ್ ಬಾಕ್ಸಿನಲ್ಲಲ್ಲ, ನಿಮ್ಮ ಬ್ಲಾಗಿನಲ್ಲೋ, ಅಥವಾ ಮತ್ತೊಂದು ಬ್ಲಾಗಿನಲ್ಲೋ ದಯವಿಟ್ಟು ಆರಂಭಿಸಿ. ನಿಮ್ಮ ಉದ್ದೇಶ ಶ್ಲಾಘನೀಯ, ಉತ್ಸಾಹ ಅದ್ಭುತ ಆದರೆ ಈ ಸ್ಥಳ ಸೂಕ್ತವಲ್ಲ, ಅಷ್ಟೆ. ಮುಂದಿನ ಕಮೆಂಟುಗಳಲ್ಲಿ ನಾನು ವಿಜ್ಞಾನಾಧಾರಿತ ಚರ್ಚೆಯನ್ನು ನೋಡಲಿಚ್ಛಿಸುತ್ತೇನೆ, ಭಾಗವಹಿಸಲು ಆಶಿಸುತ್ತೇನೆ.ನಿಮ್ಮ ಮತ್ತು ಶ್ರೀಕಾಂತರ ನಡುವಿನ ಸಂಭಾಷಣೆಗೆ ನಾನು ಮಧ್ಯಪ್ರವೇಶಿಸುವುದಿಲ್ಲ. ಅದರ ಬಗ್ಗೆ ಎನೂ ಪ್ರತಿಕ್ರಯಿಸಲೂ ಇಚ್ಛಿಸುವುದಿಲ್ಲ.

ಇನ್ನು ನಿಮ್ಮ ಎರಡು ಕಮೆಂಟುಗಳಿಗೆ ನನ್ನ ಪ್ರತ್ಯುತ್ತರ :

ಆಕಾಶ ಅನಂತ ಅಂದ್ರೆ ಘನಗೋಲ,ಚೆಂಡು ಅಥವಾ ಬೆಣ್ಣೆ ಮುದ್ದೇನೆ?! !

ಅಲ್ಲ ಅಂತ ಅಂತೀರಾ ? ಸದ್ಯ. ಆದರೆ ನಿಮ್ಮ ಆಕಾಶದ ಪರಿಕಲ್ಪನೆ ಅಧ್ಯಾತ್ಮದ ಎಡೆಯಲ್ಲಿದ್ದರೆ ನಾನು ಉತ್ತರಿಸಲು ಇಚ್ಛಿಸುವುದಿಲ್ಲ.

ಈ ಮೊದಲು ಚರ್ಚಿಸಿದ ರಬ್ಬರ್ ಎxಪಾನ್ಶನ್ analogy ಎಡ್ಜ್ ಇದೆ ಅನ್ನೋ ಹಾಗೆ ಹೇಳುತ್ಯೇ?

ನೀವು ಈ ಉದಾಹರಣೆಯ ಮೂಲಕ ಇದನ್ನೇ ಹೇಳಲು ಪ್ರಯತ್ನಿಸುತ್ತಿದ್ದೀರೆಂದು ಭಾವಿಸಿದೆ ಅಷ್ಟೇ. ನೀವೇ ಹೇಳಿದ್ದೀರಲ್ಲ,ಉದಾಹರಣೆಯನ್ನ ಕೊಟ್ಟು ಅರ್ಥ ಮಾಡಿಸ್ಬೇಕು ಅಂತ..ನೀವು ಕೊಟ್ಟ ಉದಾಹರಣೆಯನ್ನ ನಾನು ಹೀಗೆ ಅರ್ಥ ಮಾಡಿಕೊಂಡೆ.

“It expands into nothingness..” How do you see this nothingness? ನೀವು ನಥಿಂಗ್ನೆಸ್ಸನ್ನು "ನೋಡ"ಲಿಚ್ಛಿಸುವಿರಾ ? ಆಕಾಶದ ಹನ್ನೊಂದು ಆಯಾಮದ ಕಲ್ಪನೆಯನ್ನು ಮಾಡಿಕೊಳ್ಳಬಲ್ಲಿರಾ ? ಭೇಷ್ ! ಮೆಚ್ಚಿದೆ ನಿಮ್ಮ ಕಲ್ಪನಾಶಕ್ತಿಯನ್ನ. ನೀವು ಆಕಾಶದ ಹನ್ನೊಂದು ಆಯಾಮಗಳ ಕಲ್ಪನೆ ಮಾಡಿಕೊಂಡು ಅದರ ಅಂತ (edge) ಅನ್ನು ನೋಡಿ , ಆಮೇಲೆ ಅದು ನಥಿಂಗ್ನೆಸ್ಸಿನಲ್ಲಿ ಹಿಗ್ಗುತ್ತಿರುವುದನ್ನು ನಿಮ್ಮ ಅದೇ ಎರಡು ದಿವ್ಯ ಚಕ್ಷುಗಳಲ್ಲಿ ನೋಡಿ. ನಮಗೂ ಅದರ ಅನುಭವವನ್ನು ವೈಜ್ಞಾನಿಕವಾಗಿ ತಿಳಿಸಿ ದಯವಿಟ್ಟು.

You say, ಆಕಾಶಕ್ಕೆ ಅಂತ್ಯವಿದೆ.. Does it mean, ಆಕಾಶ is different from that nothingness/void..

ವಿಜ್ಞಾನದ ಪರಿಭಾಷೆಯಲ್ಲಿ ಖಾಲಿತನವನ್ನು void ಎನ್ನುತ್ತಾರೆ. ನಮ್ಮ " ಜಾಗ ಖಾಲಿ" ಅರ್ಥದಲ್ಲಲ್ಲ..ಇದಿನ್ನು model ರೂಪದಲ್ಲಿದೆ. anything other than space is void.ಅದೂ ಆಕಾಶವೋ ( ನಿಮ್ಮ ಅದ್ವೈತದ ಪ್ರಕಾರ)ಅಥವಾ ಬೇರೆಯದೋ ಅದನ್ನು "ನೋಡಿ"ದವರೇ ಹೇಳಬೇಕು. ಇದು ವಾದವಷ್ಟೆ.
You say ಅಂತ್ಯವಿದೆ and also say (ಅದು ಇದ್ದರೆ ) ನಾವು ತಿಳಿಯಬೇಕಿದೆ… It shows there is contradiction in your mind..
How do you see “END”?


ನೀವು ನಾನು ಉಪಯೋಗಿಸುವ ಎರಡು ಪದಗಳನ್ನು ಗಮನವಿಟ್ಟು ನೋಡಿಲ್ಲ, ಹೀಗಾಗತ್ತೆ ಕೆಲವೊಮ್ಮೆ. ತೊಂದರೆ ಇಲ್ಲ. ನಾನು ಉಪಯೋಗಿಸಿರುವ ಎರಡು ಪದಗಳು ಅಂತ್ಯ ಮತ್ತು ಅಂತ. ಅಂತ್ಯ ಅಂದರೆ end ಅಂತ ಅಂದರೆ edge . ನನ್ನ ಮನಸ್ಸಿನಲ್ಲಿ ಯಾವುದೇ ರೀತಿಯ contradiction ಇಲ್ಲ. ನೀವು ಆಕಾಶದ ಅಂತ್ಯ ನೋಡಬೇಕಿದ್ದರೆ ದೇವರಿಗೆ ಅಪ್ಪ್ಲಿಕೇಷನ್ ಹಾಕಿ, ಎಂಟ್ರೋಪಿ maximum ಆಗುವವರೆಗೂ ನನಗೆ ಆಯುಷ್ಯ ಕೊಡಪ್ಪಾ ಅಂತ !

4. How would you define and differentiate, absolute and constant?
absolute ಅಂದರೆ ಅದು ಯಾವ frame of reference ನಲ್ಲೂ ಬದಲಾಗದು ಅಂತ. constant ಅಂಡರೆ ಅದರ ಮೌಲ್ಯ. ಈಗ velocity of light ಕೂಡಾ change ಆಗುತ್ತಿದೆ ಅಂತ reports ಇವೆ. theory of parallel universes ಅಂತ ಒಂದು hypothesis ಇದೆ. ಅದರಲ್ಲಿ velocity of light change ಆಗಬಹುದೆಂಬ ವಾದವಿದೆ.ಆ ವಾದವನ್ನು ಮನಸ್ಸಿನಲ್ಲಿಟ್ಟುಕೊಂಡೇ ನಾನು ಅದು constant ಅಂದಿದ್ದು.

5. Before going further, let us have some common understandings on some physical terms...

a. How do you see “Entropy”?


like how thermodynamics asks us to see it.

b. As regards the Doppler effect, we see it thus,
It is an apparent physical observation. It occurs when observer goes away or towards the source of wave (Mechanical or electromagnetic)...
When observer is going away, he will be catching a particular pulse delayed in time (Taking his static position as normal one)... so the wavelength becomes longer (than the wavelength he would see when he is static).
[Sinusoidal wave representation is just graphical representation for analysis; there should be no direct analogy towards the graphical symbol when it is said wave here].
And when observer is going towards the source of wave, the opposite is observed... I.e. he catches a particular pulse in ahead the normal time.. and wavelength will become shorter.
Please let me know if you see Doppler Effect different from this.
c. When we say shift in Doppler effect, it is just said wrt the graphical frequency/wavelength band on paper.. i.e., the wavelength of particular source was here on the band... since change in wavelength occurred, we point that on graphical band and say it is moved to the left or right wrt the previous observation... (Blue and Red are the references to say direction of shift on the electromagnetic wave band representation). If you have anything extra to say here, please bless me.


this is exactly what I mean by Doppler effect. but you didnt seem to think so when you wrote the same in kannada. kindly read your comment again.

ಇನ್ನು ನನ್ನ ಅವಸರದ ಪ್ರತಿಕ್ರಿಯೆಯ ಬಗ್ಗೆ. ನಾನು ಕಮೆಂಟನ್ನು ಪೂರ್ಣವಾಗಿ, ಆಮೂಲಾಗ್ರವಾಗಿ ಓದಿಯೇ ಪ್ರತಿಕ್ರಯಿಸುತ್ತೇನೆ. ಮತ್ತು, ನಾನು ನನ್ನ ಪ್ರತಿಕ್ರಿಯೆಯ ಪ್ರತಿಯೊಂದು ಪದವನ್ನು ಯೋಚಿಸಿ ಹಾಕುತ್ತೇನೆ. ವಿಜ್ಞಾನದ ವಿದ್ಯಾರ್ಥಿಗಳಿಗೆ ಅವರ energyಯನ್ನು ಹೇಗೆ ಉಪಯೋಗಿಸಬೇಕು, ಎಲ್ಲಿ ಎಷ್ಟು conserve ಮಾಡಬೇಕು, ಪದಪದಕ್ಕೆ ಎಷ್ಟು ಘಾತ, ತೂಕಕೊಡಬೇಕೆಂದು ಸ್ನಾತಕೋತ್ತರ ಪದವಿಯಲ್ಲಿ ಸಾರಿ ಸಾರಿ ಹೇಳಿಕೊಟ್ಟಿರುತ್ತಾರೆ. ಆದ್ದರಿಂದ ನನ್ನ ಕಮೆಂಟು ಅವಸರದ ಪ್ರತಿಕ್ರಿಯೆಯಲ್ಲ.

ಇನ್ನು ನನ್ನ ಕಮೆಂಟಿನ ಶೈಲಿಯ ಬಗ್ಗೆ ನಿಮಗೆ ತಕರಾರಿದ್ದ ಹಾಗಿದೆ. ನಾನು highlight ಮಾಡಿರುವ ವಿಷಯಗಳ ಬಗ್ಗೆ ನಾನು ಸ್ಪಷ್ಟೀಕರಣ ಮತ್ತು ಅಭಿಪ್ರಾಯ ಕೊಡುತ್ತೇನೆ. ಮಿಕ್ಕ ವಿಷಯಳಲ್ಲಿ ನನ್ನ ಸಹಮತಿಯಿದೆ ಎಂದು ಅರ್ಥ. ನಾನು ಸಂದರ್ಭದಿಂದ ಪ್ರತ್ಯೇಕಿಸಿದೆ ಎಂದು ನೀವಂದುಕೊಳ್ಳುವುದು ನನಗೆ ಆಶ್ಚರ್ಯ ತರಿಸುತ್ತದೆ.ನಾನು highlight ಮಾಡುವ ನಿಮ್ಮ ಆ ವಾಕ್ಯಗಳು ನನಗೆ ಸಮ್ಮತವಿಲ್ಲವೆಂದರ್ಥ. ಅದನ್ನು ಸಂದರ್ಭದಿಂದ ಪ್ರತ್ಯೇಕಿಸುತ್ತಿಲ್ಲ, ಎತ್ತಿ ತೋರಿಸುತ್ತಿದ್ದೇನೆ. ಪ್ರತ್ಯೇಕ ಸಂದರ್ಭಕ್ಕೆ ಪ್ರತ್ಯೇಕ paragraph ಅಥವಾ ಬೇರೆ ಕಮೆಂಟನ್ನೇ ಉಪಯೋಗಿಸಲು ಬ್ಲಾಗರ್ ಅವಕಾಶ ಕಲ್ಪಿಸಿಕೊಟ್ಟಿದೆ. ನಾನು ಅದರ ಬಳಕೆ ಮಾಡುತ್ತೇನೆ.

Vinayak Hampiholi said...

ಇನ್ನೊಂದು ಉದಾಹರಣೆಯನ್ನು ನೀಡಬಹುದು. ಭೂಮಿಯ ಮೇಲ್ಮೈ ೨ ಆಯಾಮಗಳದ್ದು (ಅಕ್ಷಾಂಶ,ರೇಖಾಂಶ).ಹೀಗಾಗಿ ಭೂಮಿಯ ಮೇಲ್ಮೈಗೆ ಅಂತ್ಯವಿಲ್ಲ. ಆದರೆ ಅದು ಅನಂತವಲ್ಲ. Earth is finite. But it has no end. ಭೂಮಿಯ ಒಂದು ಬಿಂದುವಿನಿಂದ ಮೂಗಿನ ನೇರವಾಗಿ ಹೊರಟರೆ ಮತ್ತಲ್ಲಿಗೇ ಬರುತ್ತೇವೆ. ಹಾಗೆಯೇ ಈ ವಿಶ್ವವೂ ಕೂಡ. ನಾವು ಬೆಳಕಿನ ವೇಗಕ್ಕಿಂತ ವೇಗವಾಗಿ ವಿಶ್ವಪರ್ಯಟನೆಗೆ ಹೋದರೆ (ಅದು ಆಗುವದಿಲ್ಲ ಆ ಮಾತು ಬೇರೆ) ಮತ್ತೆ ಅಲ್ಲಿಗೇ ಬಂದು ಸೇರುತ್ತೇವೆ. ವಿಶ್ವ ೪ (space,time) ಆಯಾಮಗಳ ಗೋಳ. ಆದ್ದರಿಂದ ಆಕಾಶಕ್ಕೆ ಅಂತ್ಯವಿಲ್ಲ. ಆದರೆ ಅದು ಅನಂತವಲ್ಲ. ಆಕಾಶಕ್ಕೂ ಹುಟ್ಟು ಸಾವುಗಳಿವೆ. ಆಕಾಶದ ಆಚೆ ಏನಿದೆ ಎಂಬ ಪ್ರಶ್ನೆಯೇ ಉದ್ಭವಿಸುವದಿಲ್ಲ. ಏಕೆಂದರೆ ಭೂಮಿಯ ಆಚೆ ಹೇಗೆ ಭೂಮಿಯೇ ಇದೆಯೋ ಹಾಗೆಯೇ ಆಕಾಶದ ಆಚೆಗೆ ಆಕಾಶವೇ ಇರುತ್ತದೆ. ವಸ್ತುಗಳು ಹುಟ್ಟಿ ಬೆಳೆಯಲು ಆಕಾಶ ಬೇಕು. ಆದರೆ ಆಕಾಶ ಹುಟ್ಟಿ ಬೆಳೆದು ನಾಶವಾಗಲು ಆಕಾಶವೇ ಏಕೆ ಬೇಕು? ತಾತ್ತ್ವಿಕವಾಗಿ ತೈತ್ತಿರೀಯ ಉಪನಿಷತ್ತಿನ ಒಂದು ಸಾಲನ್ನು ಇದಕ್ಕೆ ಉತ್ತರವನ್ನಾಗಿ ನೀಡಬಹುದು.

ಆತ್ಮನ: ಆಕಾಶಃ ಸಂಭೂತಃ. ಆಕಾಶಾದ್ವಾಯುಃ, ವಾಯೋರಗ್ನಿ: ಅಗ್ನೇರಾಪಃ, ಅದ್ಭ್ಯಃ ಪ್ರಥಿವೀ. ಪ್ರಥಿವ್ಯಾ ಓಷಧಯಃ ಓಷಧೀಭ್ಯೋ ಅನ್ನಂ ಅನ್ನಾತ್ ಪುರುಷ:

ಆತ್ಮನಿಂದ ಆಕಾಶ ಹುಟ್ಟಿತು. ಆಕಾಶದಿಂದ ಜಲಜನಕ, ಅದರಿಂದ ನಕ್ಷತ್ರಗಳು, ಅವುಗಳಿಂದ ಬೆಳಕು, ಅಲ್ಲಿಂದ ದ್ರವ ವಸ್ತುಗಳು, ನಂತರ ಘನೀಕರಿಸಿ ಘನವಸ್ತುಗಳು, ಅನಂತರ ಮರಗಳು, ಅಲ್ಲಿಂದ ಆಹಾರ, ಅಲ್ಲಿಂದ ಪ್ರಾಣಿ ವರ್ಗ ಗಳು ಹುಟ್ಟಿದವು.

Suresh said...

I just happened to see your blog and I'm really impressed with the contents and the discussions. Lot of things to learn from this site! I'm sorry I couldn't comment in Kannada now as I couldn't get hold of the editor. But, I do comment in Kannada the next time.

Namaskara,
Suresh