ಇಷ್ಟು ದಿನ ನಾವು ವಿಜ್ಞಾನದ ಕೆಲವು ಕುತೂಹಲಕರ ವಿಷಯಗಳನ್ನು ಅವಲೋಕಿಸಿ ಚರ್ಚಿಸಿದೆವು. ಅದರಿಂದ ಸ್ಪೂರ್ತಿಗೊಂಡು ಈಗ ಕುತೂಹಲ ವಿಷಯವೊಂದರ ಬಗ್ಗೆ ಮಾಹಿತಿಯನ್ನು ಸರಣಿಯಲ್ಲಿ ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ಅದರ ಅಂಗವಾಗಿಯೇ "ಲೇಸರ್ ಗಾಥೆ " ಎಂಬ ಸರಣಿ ಲೇಖನವನ್ನು ಪ್ರಾರಂಭಿಸುತ್ತಿದ್ದೇನೆ.
ಎಲ್ಲರ ಕೈಯಲ್ಲೂ ಈಗ ಲೇಸರ್ ಇದೆ, ಎಲ್ಲರ ಬಾಯಲ್ಲೂ ಅದರದೇ ಜಪ ನಡೆಯುತ್ತಿದೆ. ಆದರೆ ಈ ಲೇಸರ್ ಅಂದರೇನು ? ಅದ ಪೂರ್ವಾಪರ ಏನು ? ಅದರ ಆವಿಷ್ಕಾರವಾದದ್ದು ಎಂದು ? ಅದಕ್ಕೆ ಜನರು ಪಟ್ಟ ಕಷ್ಟ ಎಷ್ಟು ? ಅದು ಹೇಗೆ ಕೆಲಸ ಮಾಡುತ್ತದೆ ? ಅದರ ಉಪಯೋಗ ಏನು ? ಅದರ ಒಳಿತು ಕೆಡಕುಗಳೇನು ? ಈ ಎಲ್ಲಾ ವಿಚಾರಗಳ ಮೇಲೆ ಈ ಸರಣಿ ದೃಷ್ಟಿ ಬೀರಲಿದೆ. ತಿಂಗಳಿಗೊಂದು ಲೇಖನ ಪ್ರಕಟವಾಗಲಿದೆ. ತಾವೂ ಭಾಗವಹಿಸಿ ಪ್ರೋತ್ಸಾಹಿಸುವಿರಿ ಎಂದು ನಂಬಿದ್ದೇನೆ.